ಬಾಲಿವುಡ್ನ ಹೆಸರಾಂತ ಸಿನಿಮಾ ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ ರಿಲೀಸ್ ಆಗಿ 25 ವರ್ಷಗಳೇ ಕಳೆದಿದೆ. ಇದರ ಸವಿನೆನಪಿಗಾಗಿ ವಿಶ್ವಾದ್ಯಂತ ಸಿನಿಮಾವನ್ನ ಮತ್ತೊಮ್ಮೆ ರಿಲೀಸ್ ಮಾಡಲು ವಿತರಕರು ಚಿಂತನೆ ನಡೆಸಿದ್ದಾರೆ.
ಅಂತಾರಾಷ್ಟ್ರೀಯ ಸಿನಿಮಾ ವರ್ತಕರ ಉಪಾಧ್ಯಕ್ಷ ನೆಲ್ಸಾನ್ ಡಿಸೋಜಾ ಈ ವಿಚಾರವಾಗಿ ಮಾತನಾಡಿ, ಡಿಡಿಎಲ್ಜೆ ಸಿನಿಮಾ 25 ವರ್ಷಗಳ ಹಿಂದೆ ಬಾಲಿವುಡ್ನ್ನ ಆಳಿದಂತ ಸಿನಿಮಾ. 25 ವರ್ಷದ ಸಂಭ್ರಮದಲ್ಲಿರುವ ಸಿನಿಮಾದ ಸವಿನೆನಪಿಗಾಗಿ ವಿಶ್ವಾದ್ಯಂತ ಈ ಫಿಲಂನ್ನ ರಿ ರಿಲೀಸ್ ಮಾಡಲಿದ್ದೇವೆ ಅಂತಾ ಹೇಳಿದ್ರು.
ಜರ್ಮನಿ, ಯುಎಇ, ಸೌದಿ ಅರೇಬಿಯಾ, ಖತ್ತರ್, ಅಮೆರಿಕ, ಕೆನಡಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿದಂತೆ ಒಟ್ಟು 18 ರಾಷ್ಟ್ರಗಳಲ್ಲಿ ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೇ ತೆರೆ ಕಾಣಲಿದೆ.