alex Certify ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಧುರಿ ದೀಕ್ಷಿತ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಧುರಿ ದೀಕ್ಷಿತ್..!

ಹಲವಾರು ಸಿನಿಮಾಗಳ ಮೂಲಕ ಮನೆ ಮಾತಾದ ನಟಿ ಮಾಧುರಿ ದೀಕ್ಷಿತ್. ಯಾವುದೇ ಪಾತ್ರಕ್ಕಾದರೂ ಸೈ ಎನಿಸುವ ಸುಂದರ ಮುಖದ ಕೋಮಲೆ ಮಾಧುರಿ ದೀಕ್ಷಿತ್. ಈ ಬ್ಯೂಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 53ನೇ ವಸಂತಕ್ಕೆ ಮಾಧುರಿ ದೀಕ್ಷಿತ್ ಕಾಲಿಟ್ಟಿದ್ದಾರೆ.

ಹೌದು, 90 ರ ದಶಕದಲ್ಲಿ ಬಾಲಿವುಡನ್ನೇ ಆಳಿದ ನಟಿಯರಲ್ಲಿ ಮಾಧುರಿ ದೀಕ್ಷಿತ್ ಕೂಡ ಒಬ್ಬರು. ನಟನೆ ಅಷ್ಟೇ ಅಲ್ಲದೆ ನೃತ್ಯದ ಮೂಲಕ ಮನೆ ಮಾತಾದವರು. ಈ ನಟಿ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ನಟಿಗೆ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳು, ಸ್ಟಾರ್ ನಟರು, ಚಿತ್ರರಂಗದ ಗಣ್ಯರು ಶುಭಾಶಯ ಕೋರುತ್ತಿದ್ದಾರೆ.

ಇನ್ನು ಇವರ ಧಕ್ ‌ಧಕ್ ಹಾಡಂತೂ ಫುಲ್ ಫೇಮಸ್. ಹುಡುಗರ ದಿಲ್ ಕದ್ದ ಈ ಹಾಡು ಇಂದಿಗೂ ಕೇಳಬೇಕು ಅನಿಸುವುದಂತೂ ಸತ್ಯ. ಕಲಂಕ್, ಟೋಟಲ್ ಧಮಾಕ, ದೇವದಾಸ್, ದಿಲ್, ಬೇಟಾ, ರಾಜಾ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಮಾಧುರಿ ದೀಕ್ಷಿತ್ ನಟಿಸಿದ್ದಾರೆ. ಇಂದಿಗೂ ಎಂಗ್ ಅಂಡ್ ಎನರ್ಜೆಟಿಕ್ ಆಗಿ ಕಾಣುವ ಈ ನಟಿಗೆ ನಮ್ಮ ಕಡೆಯಿಂದಲೂ ಹುಟ್ಟುಹಬ್ಬದ ಶುಭಾಶಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...