alex Certify ಹಸುಗಳಿಗೆ ಖುದ್ದು ತಾವೇ ಮೇವು ಕತ್ತರಿಸಿದ ನಟ ದರ್ಶನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸುಗಳಿಗೆ ಖುದ್ದು ತಾವೇ ಮೇವು ಕತ್ತರಿಸಿದ ನಟ ದರ್ಶನ್

ನಟ ದರ್ಶನ್ ಸಿನಿಮಾನ ಎಷ್ಟು ಪ್ರೀತಿಸುತ್ತಾರೋ ಅದೇ ರೀತಿ ಪ್ರಾಣಿ ಪಕ್ಷಿಗಳನ್ನು ಪ್ರೀತಿಸುತ್ತಾರೆ. ಸಿನಿಮಾ-ಪ್ರಾಣಿಗಳು ದರ್ಶನ್ ‌ಗೆ ಎರಡು ಕಣ್ಣುಗಳಿದ್ದಂತೆ. ಸಿನಿಮಾ ಬಿಟ್ಟರೆ ಇವರು ಯಾವಾಗಲೂ ತಮ್ಮ ಫಾರ್ಮ್ ಹೌಸ್ ‌ನಲ್ಲೇ ಹೆಚ್ಚಿನ ಕಾಲ ಕಳೆಯುತ್ತಾರೆ. ಇನ್ನು ಲಾಕ್ ‌ಡೌನ್ ಸಮಯದಲ್ಲೂ ದರ್ಶನ್ ತಮ್ಮ ಫಾರ್ಮ್ ಹೌಸ್ ‌ನಲ್ಲೇ ಕಾಲ ಕಳೆಯುತ್ತಿದ್ದಾರೆ.

ಹೌದು. ದರ್ಶನ್ ಲಾಕ್‌ ಡೌನ್ ಸಮಯದಲ್ಲಿ ತಮ್ಮ ನೆಚ್ಚಿನ ಪ್ರಾಣಿ ಪಕ್ಷಿಗಳ ಜೊತೆ ಇರುವ ಹಾಗೂ ಅವುಗಳನ್ನು ಆರೈಕೆ ಮಾಡುವ ಅನೇಕ ವಿಡಿಯೋಗಳು ಫೋಟೋಗಳು ವೈರಲ್ ಆಗಿದ್ದವು. ಕುದುರೆಗೆ ಸ್ನಾನ ಮಾಡಿಸುವುದು, ಹಸುಗಳಿಗೆ ಹುಲ್ಲು ಹಾಕುವುದು ಸೇರಿದಂತೆ ಅನೇಕ ವಿಡಿಯೋಗಳು ಅಭಿಮಾನಿಗಳನ್ನು ಸೆಳೆದಿದ್ದವು. ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದೆ.

ಫಾರ್ಮ್ ಹೌಸ್‌ನಲ್ಲಿ ಸಾಕಿರೋ ಕುದುರೆ, ಹಸು, ಕೋಳಿಗಳಿಗೆ ತಾವೇ ಮೇವು, ಕಾಳು ಹಾಕಿ ಅವುಗಳನ್ನು ಪ್ರೀತಿಯಿಂದ ನೋಡಿಕೊಳ್ತಾ ಇದ್ದಾರೆ. ಇನ್ನು ತಾವೇ ಖುದ್ದು ಅವುಗಳಿಗೆ ಮೇವನ್ನು ಮಿಷನ್‌ಗೆ ಹಾಕಿ ಕತ್ತರಿಸುವ ಮೂಲಕ ಸಣ್ಣ ತುಂಡುಗಳಾಗಿ ತಯಾರಿ ಮಾಡ್ತಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಜೋಳದ ಕಡ್ಡಿಯನ್ನ ಮಶಿನ್‌ಗೆ ಹಾಕಿ ಕತ್ತರಿಸಿ ಕೊಡುವುದರಿಂದ ಹಸುಗಳಿಗೆ ತಿನ್ನಲು ಸುಲಭವಾಗುತ್ತದೆ ಎಂಬ ನಿಟ್ಟಿನಲ್ಲಿ ಈ ರೀತಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...