ಡ್ರಗ್ಸ್ ಕೇಸ್ನಲ್ಲಿ ಸಿಕ್ಕಿಕೊಂಡಿರುವ ನಟಿ ರಾಗಿಣಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಅತ್ತ ಮಗಳು ಜೈಲು ಪಾಲಾಗುತ್ತಿದ್ದಂತೆಯೇ ಇತ್ತ ಇವರ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಉಂಟಾಗಿದೆ. ಹೀಗಾಗಿ ರಾಗಿಣಿ ದ್ವಿವೇದಿ ಅವರ ಕನಸಿನ ಮನೆ ಮಾರಾಟ ಮಾಡಲು ಈ ಹಿಂದೆ ಅವರ ತಂದೆ ನಿರ್ಧಾರ ಮಾಡಿದ್ದರು. ಆದರೆ ಇದೀಗ ಮಗಳು ಓಡಾಡುತ್ತಿದ್ದ ಕಾರುಗಳನ್ನು ಮಾರಾಟ ಮಾಡೋದಿಕ್ಕೆ ರಾಗಿಣಿ ತಂದೆ ಮುಂದಾಗಿದ್ದಾರೆ.
ಯಲಹಂಕದ ಜ್ಯುಡಿಶಿಯಲ್ ಲೇಔಟ್ನಲ್ಲಿರುವ ಅವರ ಮನೆಯನ್ನು ಖಾಸಗಿ ವೆಬ್ ಸೈಟ್ನಲ್ಲಿ ಸೇಲ್ಗೆ ಇಡಲಾಗಿದೆ. ಆದರೆ ಈ ಮನೆಯನ್ನು ಕೊಂಡುಕೊಳ್ಳಲು ಯಾರೂ ಮುಂದೆ ಬಂದಿಲ್ಲ. ಹೀಗಾಗಿ ಕಾರುಗಳನ್ನಾದರೂ ಮಾರಾಟ ಮಾಡಿದರೆ ಹಣ ಸಿಗಬಹುದು ಎಂಬ ಕಾರಣಕ್ಕೆ ಕಾರುಗಳನ್ನು ಮಾರಾಟ ಮಾಡುತ್ತಿದ್ದಾರೆ.
ರಾಗಿಣಿ ಬಳಸುತ್ತಿದ್ದ ಇನ್ನೋವಾ ಕಾರು ಹಾಗೂ ಮಾರುತಿ ಸುಝುಕಿಯ sx4 ಕಾರನ್ನು ಮಾರಾಟ ಮಾಡೋದಿಕ್ಕೆ ಮುಂದಾಗಿದ್ದಾರೆ. ಇನೋವಾವನ್ನು 9 ಲಕ್ಷಕ್ಕೆ ಹಾಗು ಮಾರುತಿ ಸುಝಕಿಯನ್ನು 3ಲಕ್ಷಕ್ಕೆ ಮಾರಾಟ ಮಾಡುತ್ತಿದ್ದಾರೆ. ಮಗಳ ಕಾನೂನಾತ್ಮಕ ಹೋರಾಟಕ್ಕೆ ಹಣ ಬೇಕಾಗಿರೋದ್ರಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ರಾಗಿಣಿ ಪೋಷಕರು.