alex Certify ಹಣದ ವಹಿವಾಟಿನ ಕುರಿತು ಮಹತ್ವದ ಮಾಹಿತಿ ಬಿಚ್ಚಿಟ್ಟ ರಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣದ ವಹಿವಾಟಿನ ಕುರಿತು ಮಹತ್ವದ ಮಾಹಿತಿ ಬಿಚ್ಚಿಟ್ಟ ರಿಯಾ

 

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಅನೇಕ ಮಂದಿ ಸುಶಾಂತ್ ಅವರ ಸಾವು ಆತ್ಮಹತ್ಯೆ ಅಲ್ಲ ಕೊಲೆ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲ ಅವರ ಜತೆ ಸಂಬಂಧ ಹೊಂದಿದ್ದ ರಿಯಾ ಅವರ ಮೇಲೆ ಸಾಕಷ್ಟು ಆರೋಪಗಳು ಬಂದಿದ್ದವು. ಸುಶಾಂತ್ ಖಾತೆಯಲ್ಲಿದ್ದ ಹಣವನ್ನು ಈಕೆ ಲಪಟಾಯಿಸಿದ್ದಾಳೆ ಎಂದು ಆರೋಪಿಸಲಾಗುತ್ತಿತ್ತು. ಇದೆಲ್ಲದರ ನಡುವೆ ರಿಯಾ ಚಕ್ರವರ್ತಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.

ರಿಯಾ ಆದಾಯ ಕುರಿತಂತೆ ಜೊತೆಗೆ ಸುಶಾಂತ್ ಸಿಂಗ್ ಅವರ ಸಾವಿನ ವಿಚಾರವಾಗಿ ವಿಚಾರಣೆಗೆ ಒಳಪಡಿಸಿದ್ದ ಅಧಿಕಾರಿಗಳ ಮುಂದೆ ರಿಯಾ ಅನೇಕ ವಿಚಾರಗಳನ್ನು ಹೇಳಿದ್ದಾರೆ. ನಾನು ಸುಶಾಂತ್ ಅವರ ಹಣ ಲಪಟಾಯಿಸಿಲ್ಲ. ನನ್ನ ಸ್ವಂತ ದುಡಿಮೆಯಲ್ಲಿ ಖರ್ಚು ಮಾಡುತ್ತಿದ್ದೇನೆ. ನಾನು ಕೊಂಡುಕೊಂಡಿರುವ ವಸ್ತುಗಳೆಲ್ಲಾ ನನ್ನ ಹಣದಿಂದ ಎಂದು ಹೇಳಿದ್ದಾರೆ. ಹಾಗೂ ಸುಶಾಂತ್ ಅವರ ಹಣವನ್ನು ನಾನು ಬಳಸಿಲ್ಲ ಎಂದೂ ಹೇಳಿದ್ದಾರೆ.

ಫ್ಲಾಟ್ ಖರೀದಿಯ ಬಗ್ಗೆಯೂ ಅಧಿಕಾರಿಗಳು ರಿಯಾರವರನ್ನು ಪ್ರಶ್ನೆ ಮಾಡಿದ್ದಾರೆ. ಆಗ ಲೋನ್ ಮೂಲಕ ನಾನು ಮನೆ ಖರೀದಿಸಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಈ ವಿಚಾರವಾಗಿ ಮತ್ತೊಮ್ಮೆ ರಿಯಾ ಅವರ ವಿಚಾರಣೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...