alex Certify ‘ಸಿಮ್’ ಇಲ್ಲದ 3 ಮೊಬೈಲ್ ಬಳಸುತ್ತಿದ್ರು ನಟಿ ಸಂಜನಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸಿಮ್’ ಇಲ್ಲದ 3 ಮೊಬೈಲ್ ಬಳಸುತ್ತಿದ್ರು ನಟಿ ಸಂಜನಾ…!

ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿರುವ ಸ್ಯಾಂಡಲ್ ವುಡ್ ನಟಿ ಸಂಜನಾರನ್ನು ನ್ಯಾಯಾಲಯ ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ವಹಿಸಿದೆ. ಸಂಜನಾ ಡ್ರಗ್ಸ್ ಮಾರಾಟ ಜಾಲದಲ್ಲಿ ಸಕ್ರಿಯವಾಗಿದ್ದರೆಂದು ಹೇಳಲಾಗುತ್ತಿದ್ದು, ಪೊಲೀಸರ ತನಿಖೆ ವೇಳೆ ಕೆಲವೊಂದು ಕುತೂಹಲಕಾರಿ ಮಾಹಿತಿಗಳು ಬಹಿರಂಗವಾಗಿವೆ ಎನ್ನಲಾಗಿದೆ.

ಸಂಜನಾ ಬಳಿ ಮೂರು ಮೊಬೈಲ್ ಫೋನ್ ಗಳಿದ್ದು ಆದರೆ ಅವುಗಳಲ್ಲಿ ಸಿಮ್ ಬಳಕೆ ಮಾಡುತ್ತಿರಲಿಲ್ಲ ಎನ್ನಲಾಗಿದೆ. ಆರಂಭದಲ್ಲಿ ಸಿಮ್ ಬಳಸಿ ವಾಟ್ಸಾಪ್ ಖಾತೆ ತೆರೆಯುತ್ತಿದ್ದ ಸಂಜನಾ ಬಳಿಕ ಸಿಮ್ ತೆಗೆದು ಹಾಕಿ ವೈಫೈ ನೆಟ್ವರ್ಕ್ ನಿಂದ ವಾಟ್ಸಾಪ್ ಕಾಲ್, ಚಾಟ್ ನಡೆಸುತ್ತಿದ್ದರೆನ್ನಲಾಗಿದೆ.

ಅಲ್ಲದೆ ಸಂಜನಾ ಹೊಂದಿರುವ ಮೊಬೈಲ್ ಫೋನ್ಗಳು ಅತಿ ಕಡಿಮೆ ಮೆಮೊರಿ ಹೊಂದಿದ್ದು, ಮೆಮೊರಿ ಜಾಸ್ತಿಯಾದಂತೆ ಹಳೆಯ ಕಾಲ್ ಹಾಗೂ ಚಾಟ್ ಗಳು ಅಳಿಸಿ ಹೋಗುತ್ತಿದ್ದವೆನ್ನಲಾಗಿದೆ.

ಹೀಗಾಗಿಯೇ ಮುಂದೊಂದು ದಿನ ತಾನು ಸಿಕ್ಕಿ ಬೀಳಬಾರದೆಂಬ ಕಾರಣಕ್ಕೆ ಸಂಜನಾ ಇಷ್ಟೆಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರಬಹುದೆಂಬ ಶಂಕೆ ಹೊಂದಿರುವ ಪೊಲೀಸರು, ಮತ್ತಷ್ಟು ವಿಚಾರಣೆ ನಡೆಸಲು ಸಂಜನಾರನ್ನು ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈಗ ಅವರನ್ನು ಮೂರು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ವಹಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...