alex Certify ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ವಿರುಷ್ಕಾರ ಈ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ವಿರುಷ್ಕಾರ ಈ ಫೋಟೋ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಲಾಕ್ ಡೌನ್ ಮಧ್ಯೆಯೂ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಅನುಷ್ಕಾ ಶರ್ಮಾ ಅಭಿಮಾನಿಗಳ ನಿರೀಕ್ಷೆ ಪೂರ್ಣಗೊಳಿಸಿದ್ದಾರೆ. ಅವ್ರ ಪಟಾಲ್ ಲೋಕ್ ವೆಬ್ ಸರಣಿ ಬಿಡುಗಡೆಯಾಗಿದೆ. ಇದನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಅನುಷ್ಕಾ ಶರ್ಮಾ ಕೂಡ ಮನೆಯಲ್ಲಿ ಸರಣಿಯ ಮೊದಲ ಭಾಗವನ್ನು ವೀಕ್ಷಿಸಿದ್ದಾರೆ. ಅದ್ರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ಟಿವಿ ಮುಂದೆ ಕುಳಿತು ನಗ್ತಿರುವ ಫೋಟೋವನ್ನು ಅನುಷ್ಕಾ ಹಂಚಿಕೊಂಡಿದ್ದಾರೆ. ಆದ್ರೆ ಈ ಫೋಟೋದಲ್ಲಿರುವ ಇನ್ನೊಂದು ಫೋಟೋ ವೈರಲ್ ಆಗಿದೆ.

ಅನುಷ್ಕಾ ಮುಂದೆ ಕೊಹ್ಲಿ-ಅನುಷ್ಕಾ ಮದುವೆ ಚಿತ್ರವೊಂದಿದೆ. ಅದನ್ನು ಕೈನಲ್ಲಿ ಬಿಡಿಸಲಾಗಿದೆ. ಅದು ವ್ಯಂಗ್ಯ ಚಿತ್ರದ ರೂಪದಲ್ಲಿದೆ. ಇದನ್ನು ನೋಡಿದ ಅಭಿಮಾನಿಗಳು ಫೋಟೋಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...