alex Certify ಸಂಜನಾ ಗುಪ್ತ್ ಗುಪ್ತ್ ಡ್ರಗ್ಸ್ ಪಾರ್ಟಿ ರಹಸ್ಯ ಬಯಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಜನಾ ಗುಪ್ತ್ ಗುಪ್ತ್ ಡ್ರಗ್ಸ್ ಪಾರ್ಟಿ ರಹಸ್ಯ ಬಯಲು

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ಸಂಬಂಧ ಬಂಧನಕ್ಕೀಡಾಗಿರುವ ನಟಿ ಸಂಜನಾ ಗಲ್ರಾಣಿ ಅವರ ರಹಸ್ಯ ಪಾರ್ಟಿ ಆಯೋಜನೆ ಹಿಂದಿನ ಗುಟ್ಟು ರಟ್ಟಾಗಿದೆ. ಈ ಬಗ್ಗೆ ಸಿಸಿಬಿ ತನಿಖೆ ವೇಳೆ ಒಂದೊಂದೇ ಮಾಹಿತಿ ಹೊರ ಬರುತ್ತಿದೆ.

ನಟಿ ಸಂಜನಾ ತಮ್ಮ ಮನೆ ಹಾಗೂ ಫ್ಲ್ಯಾಟ್ ಗಳಲ್ಲೇ ಮಿಡ್ ನೈಟ್ ಡ್ರಗ್ಸ್ ಪಾರ್ಟಿ ಆಯೋಜನೆ ಮಾಡುತ್ತಿದ್ದರು. ಈ ಪಾರ್ಟಿಗಳಿಗೆ ಆಯ್ದ ವ್ಯಕ್ತಿಗಳಿಗೆ ಮಾತ್ರ ಆಹ್ವಾನ ನೀಡುತ್ತಿದ್ದರು. ಹೊರ ಜಗತ್ತಿಗೆ ಗೊತ್ತಾಗಬಾರದು ಎಂಬ ಕಾರಣಕ್ಕೆ ಮನೆಯಲ್ಲಿಯೇ ಪಾರ್ಟಿ ಆಯೋಜನೆ ಮಾಡುತ್ತಿದ್ದರು ಎನ್ನಲಾಗಿದೆ.

ಇದಕ್ಕಾಗಿ ಪ್ರತ್ಯೇಕ ತಮ್ಮದೇ ತಂಡವನ್ನು ರಚಿಸಿಕೊಂಡಿದ್ದ ಸಂಜನಾ, ಭದ್ರತಾ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ಮಧ್ಯರಾತ್ರಿಯಿಂದ ಆರಂಭವಾಗುವ ಪಾರ್ಟಿ ಬೆಳಗಿನವರೆಗೂ ನಡೆಯುತ್ತಿತ್ತು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...