alex Certify ವಿದೇಶದಲ್ಲಿ ʼಗಾಳಿಪಟʼ ಹಾರಿಸಲು ಸಜ್ಜಾದ ಯೋಗರಾಜ್ ಭಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದೇಶದಲ್ಲಿ ʼಗಾಳಿಪಟʼ ಹಾರಿಸಲು ಸಜ್ಜಾದ ಯೋಗರಾಜ್ ಭಟ್

ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಇದೀಗ ವಿದೇಶದಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.

ಕೊರೊನಾ ಲಾಕ್ ಡೌನ್ ನಿಂದಾಗಿ ಗಾಳಿಪಟ-2 ಚಿತ್ರೀಕರಣ ವಿಳಂಬವಾಗಿತ್ತು. ಇದೀಗ ಮತ್ತೆ ಶೂಟಿಂಗ್ ಗೆ ಚಿತ್ರತಂಡ ಸಜ್ಜಾಗಿದ್ದು, ಹೊಸ ವರ್ಷದಲ್ಲಿ ಯುರೋಪ್ ನಲ್ಲಿ ಚಿತ್ರೀಕರಣ ನಡೆಸಲು ಸಿದ್ಧತೆ ನಡೆಸಲಾಗಿದೆಯಂತೆ. ಯುರೋಪ್ ನಲ್ಲಿ ಚಿತ್ರದ ಕೆಲ ಹಾಡು ಹಾಗೂ ಟಾಕಿ ಭಾಗದ ಚಿತ್ರೀಕರಣ ಮಾಡಲಾಗುತ್ತಿದೆ ಎನ್ನಲಾಗಿದೆ.

ಗಾಳಿಪಟ-2 ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಹಾಗೂ ಲೂಸಿಯಾ ನಿರ್ದೇಶಕ ಪವನ್ ಕುಮಾರ್ ಅಭಿನಯಿಸುತ್ತಿದ್ದು, ಇವರಿಗೆ ನಾಯಕಿಯರಾಗಿ ಶರ್ಮಿಳಾ ಮಾಂಡ್ರೆ, ಸಂಯುಕ್ತ ಮೆನೆನ್, ನಿಶ್ವಿಕಾ ನಾಯ್ಡು ನಟಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...