alex Certify ವಾರಾಂತ್ಯಕ್ಕೆ ಅಭಿಮಾನಿಗಳೊಂದಿಗೆ ಸುದೀಪ್ ಸಂವಾದ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾರಾಂತ್ಯಕ್ಕೆ ಅಭಿಮಾನಿಗಳೊಂದಿಗೆ ಸುದೀಪ್ ಸಂವಾದ…!

ನಟ ಸುದೀಪ್ ಸದಾ ಒಂದಿಲ್ಲೊಂದು ವಿಶೇಷ ಕಾರ್ಯಕ್ರಮಗಳ ಮೂಲಕ ಹೆಸರಾದ ನಟ. ಕೊರೊನಾ ಸಮಯದಲ್ಲೂ ಈ ನಟ ಮನೆಯಲ್ಲಿ ಸುಮ್ಮನೆ ಕುಳಿತಿಲ್ಲ. ಬದಲಾಗಿ ಎಲ್ಲಾ ಅಭಿಮಾನಿಗಳನ್ನು ಮಾತನಾಡಿಸುತ್ತಾ ಅವರಿಗೆ ದರ್ಶನ ನೀಡುತ್ತಲೇ ಇದ್ದಾರೆ. ಇದೀಗ ಮತ್ತೆ ಅಭಿಮಾನಿಗಳನ್ನು ರಂಜಿಸೋಕೆ ವಾರಾಂತ್ಯಕ್ಕೆ ಬರುತ್ತಿದ್ದಾರೆ.

ಹೌದು, ಶನಿವಾರ ಮತ್ತು ಭಾನುವಾರ ರಾತ್ರಿ 8 ರಿಂದ 10 ಗಂಟೆಯವರೆಗೆ ಲೈವ್ ಬರುವ ಮೂಲಕ ಅಭಿಮಾನಿಗಳನ್ನು ಭೇಟಿಯಾಗುತ್ತಿದ್ದಾರೆ ಈ ನಟ. ನಾಳೆಯೂ ಕಿಚ್ಚನ ಲೈವ್ ಪ್ರೋಗ್ರಾಂ ಇದೆ. ಹೀಗಾಗಿ ಅನೇಕ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ ನಾಳೆಯ ಕಿಚ್ಚನ ಲೈವ್ ಕಾರ್ಯಕ್ರಮಕ್ಕೆ.

ಇನ್ನು ರಾಜ್ಯದ ಅಭಿಮಾನಿಗಳನ್ನಷ್ಟೇ ಅಲ್ಲದೆ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರನ್ನು ಲೈವ್ ಮೂಲಕ ಭೇಟಿಯಾಗುತ್ತಿದ್ದಾರೆ ಸುದೀಪ್. ಅನೇಕ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಅಭಿಮಾನಿಗಳಿಗೆ ಖುಷಿ ನೀಡುತ್ತಿದ್ದಾರೆ ಈ ನಟ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...