alex Certify ರಿಯಾ ಚಕ್ರವರ್ತಿಗೂ ಡ್ರಗ್ ಪೆಡ್ಲರ್ ‌ಗೂ ಇತ್ತಾ ನಂಟು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಯಾ ಚಕ್ರವರ್ತಿಗೂ ಡ್ರಗ್ ಪೆಡ್ಲರ್ ‌ಗೂ ಇತ್ತಾ ನಂಟು…?

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಕೇಸ್‌ನಲ್ಲಿ ಹೆಚ್ಚು ಚರ್ಚೆಗೊಳಗಾದವರು ಹಾಗೂ ಹೆಚ್ಚು ಆರೋಪಗಳನ್ನು ಹೊತ್ತವರು ಎಂದರೆ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ. ಇದೀಗ ಈ ನಟಿಯ ಬಗ್ಗೆ ಮತ್ತೊಂದು ಆರೋಪ ಕೇಳಿ ಬರುತ್ತಿದೆ.

ಹೌದು, ಸುಶಾಂತ್ ಸಿಂಗ್ ಕೇಸ್‌ನಲ್ಲಿ ಡ್ರಗ್ಸ್ ವಿಚಾರ ಬೆಳಕಿಗೆ ಬಂದಿದೆ. ರಿಯಾ ವಾಟ್ಸಾಪ್ ಚಾಟ್‌ಗಳಿಂದ ಡ್ರಗ್ಸ್ ಬಗ್ಗೆ ಮಾಹಿತಿ ತಿಳಿದಿತ್ತು. ಇದೀಗ ಮುಂಬೈನಲ್ಲಿ ಬಂಧಿಸಲಾದ ಇಬ್ಬರು ಡ್ರಗ್ಸ್ ದಂಧೆಕೋರರಿಗೂ ರಿಯಾಗೂ ನಂಟು ಇತ್ತು ಎಂದು ಹೇಳಲಾಗುತ್ತಿದೆ. ಅಷ್ಟೆ ಅಲ್ಲ ರಿಯಾ ಸಹೋದರ ಶುವಿಕ್‌ಗೂ ಕೂಡ ಸಂಪರ್ಕ ಇತ್ತು ಎನ್ನಲಾಗುತ್ತಿದೆ.

ಇನ್ನು ಈ ವಿಚಾರವಾಗಿ ಈಗಾಗಲೇ ರಿಯಾ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇದೀಗ ಅವರನ್ನು ಬಂಧಿಸುವ ಸಾಧ್ಯತೆಗಳು ಕೂಡ ಹೆಚ್ಚಿವೆ ಎಂದು ಹೇಳಲಾಗುತ್ತಿದೆ.

ಒಟ್ನಲ್ಲಿ ಸುಶಾಂತ್ ಸಿಂಗ್ ಕೇಸ್ ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಪ್ರಕರಣದಲ್ಲಿ ಒಂದಿಷ್ಟು ಜನ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ಸುಶಾಂತ್ ಕುಟುಂಬ ಹಾಗೂ ಅವರ ಅಭಿಮಾನಿಗಳು ಕೊಲೆ ಎನ್ನುತ್ತಿದ್ದಾರೆ. ಈ ಎಲ್ಲಾ ಸತ್ಯಾಸತ್ಯತೆಗಳು ತನಿಖೆಯಿಂದಷ್ಟೆ ಹೊರ ಬರಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...