alex Certify ರಕ್ತದಿಂದ ‘ಕಾಶ್ಮೀರ ಫೈಲ್ಸ್’ ಪೋಸ್ಟರ್ ರಚಿಸಿದ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಕ್ತದಿಂದ ‘ಕಾಶ್ಮೀರ ಫೈಲ್ಸ್’ ಪೋಸ್ಟರ್ ರಚಿಸಿದ ಮಹಿಳೆ..!

ವಿವೇಕ್ ಅಗ್ನಿಹೋತ್ರಿ ಅವರ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಪ್ರೇಕ್ಷಕರಿಂದ ಅಗಾಧ ಪ್ರತಿಕ್ರಿಯೆಯನ್ನು ದಾಖಲಿಸಿದೆ. ರಾಜಕೀಯ ಥ್ರಿಲ್ಲರ್ ಸಿನಿಮಾ ವೀಕ್ಷಿಸಲು ಪ್ರಪಂಚದಾದ್ಯಂತದ ಜನರು ಚಿತ್ರಮಂದಿರಗಳಿಗೆ ಲಗ್ಗೆಯಿಡುತ್ತಿದ್ದು, ಅಗ್ನಿಹೋತ್ರಿ ಅವರ ಚಿತ್ರದ ಸುತ್ತಲಿನ ಕ್ರೇಜ್ ಅಗಾಧವಾಗಿ ಬೆಳೆಯುತ್ತಲೇ ಇದೆ.

ಇತ್ತೀಚೆಗೆ, ವಿದಿಶಾದ ಮಹಿಳಾ ಕಲಾವಿದೆಯೊಬ್ಬರು ಚಲನಚಿತ್ರದಿಂದ ಪ್ರಭಾವಿತರಾಗಿದ್ದು, ತಮ್ಮ ರಕ್ತದಿಂದ ಈ ಚಿತ್ರದ ಪೋಸ್ಟರ್ ಅನ್ನು ರಚಿಸಿದ್ದಾರೆ. ಮಂಜು ಸೋನಿ ಎಂದು ಗುರುತಿಸಲಾದ ಕಲಾವಿದೆ ತನ್ನ ಸುಮಾರು 10 ಮಿಲಿ ರಕ್ತದಿಂದ ಕಾಶ್ಮೀರ ಫೈಲ್ಸ್‌ನ ಏಳು ಪ್ರಮುಖ ಪಾತ್ರಗಳನ್ನು ಚಿತ್ರಿಸಿ ಪೋಸ್ಟರ್ ಮಾಡಿದ್ದಾರೆ.

ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ, ಕಲೆಯ ಚಿತ್ರವನ್ನು ಹಂಚಿಕೊಂಡು ಮಹಿಳೆಗೆ ಧನ್ಯವಾದ ಹೇಳಿದ್ದಾರೆ. ಅಲ್ಲದೆ ಯಾರೂ ಕೂಡ ರಕ್ತದಲ್ಲಿ ಚಿತ್ರಿಸುವಂಥದ್ದನ್ನೆಲ್ಲಾ ಮಾಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗಿದೆ. ಆಕೆಯ ಕಲಾ ಚಾತುರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಚಿತ್ರಕಲೆಯಲ್ಲಿ ರಕ್ತ ಬಳಸಿರುವುದು ಮಾತ್ರ ನೆಟ್ಟಿಗರು ಇಷ್ಟಪಟ್ಟಿಲ್ಲ.

1990 ರಲ್ಲಿ ಕಾಶ್ಮೀರಿ ಪಂಡಿತರು ಅನುಭವಿಸಿದ ಕ್ರೂರ ನೋವುಗಳ ಕಥೆಯನ್ನು ಹೇಳುವ ಕಾಶ್ಮೀರ ಫೈಲ್ಸ್ ಸಿನಿಮಾದಲ್ಲಿ, ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಶಿ ಮುಂತಾದವರು ಅಭಿನಯಿಸಿದ್ದಾರೆ.

— Vivek Ranjan Agnihotri (@vivekagnihotri) March 24, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...