alex Certify ಯುಟ್ಯೂಬ್ ನಲ್ಲಿ 40 ಮಿಲಿಯನ್ ವೀಕ್ಷಣೆ ಪಡೆದ ‘ಪೊಗರು’ ಸಿನಿಮಾ ಹಿಂದಿ ವರ್ಷನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುಟ್ಯೂಬ್ ನಲ್ಲಿ 40 ಮಿಲಿಯನ್ ವೀಕ್ಷಣೆ ಪಡೆದ ‘ಪೊಗರು’ ಸಿನಿಮಾ ಹಿಂದಿ ವರ್ಷನ್

ನಂದಕಿಶೋರ್ ನಿರ್ದೇಶನದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ‘ಪೊಗರು’ ಚಿತ್ರ ಫೆಬ್ರವರಿ 19ರಂದು ಬಿಡುಗಡೆಯಾಗಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಬಾಕ್ಸಾಫೀಸ್ ನಲ್ಲಿ ಒಟ್ಟಾರೆ 51 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ. ಈ ಸಿನಿಮಾವನ್ನು ಹಿಂದಿಗೆ ಡಬ್ ಮಾಡಿ ಆರ್.ಕೆ.ಡಿ ಯುಟ್ಯೂಬ್ ಚಾನೆಲ್ ನಲ್ಲಿ ಮೂರು ದಿನಗಳ ಹಿಂದೆ ಬಿಡುಗಡೆ ಮಾಡಿದ್ದು, ಈ ಚಿತ್ರ 40 ಮಿಲಿಯನ್ ವೀಕ್ಷಣೆ ಪಡೆದು ಭರ್ಜರಿಯಾಗಿ ಮುನ್ನುಗ್ಗುತ್ತಿದೆ.

ಬಾಲಿವುಡ್ ನ ‘ಗ್ಯಾಂಗ್ ಸ್ಟರ್’ ಸಿನಿಮಾ ತೆರೆಮೇಲೆ ಬಂದು ಇಂದಿಗೆ 15 ವರ್ಷ

ಈ ಸಿನಿಮಾ ವೀಕ್ಷಿಸಿದ ಹಿಂದಿ ಪ್ರೇಕ್ಷಕರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದು, ರಶ್ಮಿಕಾ ಮಂದಣ್ಣ ಅಭಿಮಾನಿಗಳಿಂದ ಕೂಡ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಗಳು ದೊರೆತಿವೆ. 8 ಲಕ್ಷ ಲೈಕ್ಸ್ ಗಳು ಬಂದಿವೆ. ಬಿ.ಕೆ. ಗಂಗಾಧರ್ ನಿರ್ಮಾಣದ ಈ ಸಿನಿಮಾದಲ್ಲಿ ಚಿಕ್ಕಣ್ಣ, ಕುರಿ ಪ್ರತಾಪ್, ಬುಲೆಟ್ ಪ್ರಕಾಶ್, ಡಾಲಿ ಧನಂಜಯ್, ಮಯೂರಿ, ರವಿಶಂಕರ್ ಸೇರಿದಂತೆ ಮುಂತಾದ ಕಲಾವಿದರು ಅಭಿನಯಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...