alex Certify ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಜೂ. ರಾಖಿಭಾಯ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಜೂ. ರಾಖಿಭಾಯ್

ಬೆಂಗಳೂರು: ಇಂದು ಜೂ.ರಾಖಿಭಾಯ್ ಯಥರ್ವ್ ಗೆ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ಸಿಂಡ್ರೆಲಾ, ರಾಧಿಕಾ ಪಂಡಿತ್ ತಮ್ಮ ಮಗನ ಅಪರೂಪದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಎರಡನೇ ಮಗು ಯಥರ್ವ ಇಂದು ಮೊದಲ ವರ್ಷದ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದು, ರಾಧಿಕಾ ಭಾವನಾತ್ಮಕವಾದ ಸಾಲುಗಳ ಮೂಲಕ ಮಗನಿಗೆ ಶುಭಾಶಯ ಕೋರಿದ್ದಾರೆ.

ಯಥರ್ವ ಹೊಟ್ಟೆಯಲ್ಲಿದ್ದ ಸಂದರ್ಭ, ಆತ ಹುಟ್ಟಿದ ಸಂಭ್ರಮದಲ್ಲಿ ಮಗುವನ್ನು ಯಶ್ ಹಾಗೂ ತಾನು ಮುದ್ದಾಡಿದ ಸಂತಸದ ಕ್ಷಣ, ಇಬ್ಬರು ಮಕ್ಕಳನ್ನು ಎತ್ತಿಕೊಂಡಿದ್ದ ಖುಷಿ ಕ್ಷಣ, ತಂದೆ ಯಶ್ ಎತ್ತಿಕೊಂಡಾಗ ಯಥರ್ವನ ಸಂಭ್ರಮ ಹೀಗೆ ಹಲವು ಸಂತಸದ ಕ್ಷಣಗಳ ಫೋಟೊಗಳನ್ನು ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡಿರುವ ರಾಧಿಕಾ, ಸದಾ ನನ್ನ ಬೇಬಿ ಬಾಯ್ ಆಗಿರುವ ನಿನಗೆ ಹುಟ್ಟುಹಬ್ಬದ ಶುಭಾಷಯಗಳು ಎಂದು ಭಾವನಾತ್ಮಕವಾಗಿ ಮಗನಿಗೆ ಶುಭ ಕೋರಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...