alex Certify ’ಮಾಣಿಕ್ಯ’ನ ಬೆಡಗಿಯ ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಮಾಣಿಕ್ಯ’ನ ಬೆಡಗಿಯ ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ

ದಕ್ಷಿಣ ಭಾರತದ ಖ್ಯಾತ ನಟಿ ವರಲಕ್ಷ್ಮಿ ಶರತ್ ಕುಮಾರ್ ಇದೀಗ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಕಣ್ಣಮೂಚ್ಚಿ ಎಂಬ ಸಿನಿಮಾ ಮೂಲಕ ನಿರ್ದೇಶಕಿಯಾಗಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಕಿಚ್ಚ ಸುದೀಪ್ ಅಭಿನಯದ ’ಮಾಣಿಕ್ಯ’ ಚಿತ್ರದಲ್ಲಿ ಅಭಿನಯಿಸಿರುವ ವರಲಕ್ಷ್ಮಿ, ಖ್ಯಾತ ನಟ ಶರತ್ ಕುಮಾರ್ ಅವರ ಪುತ್ರಿ. ಇದೀಗ ಕಣ್ಣಮೂಚ್ಚಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ತಮ್ಮ ಬಹುದಿನಗಳ ನಿರ್ದೇಶಕಿ ಕನಸು ನನಸು ಮಾಡಿಕೊಳ್ಳಲು ಹೊರಟಿದ್ದಾರೆ. ಮಾತ್ರವಲ್ಲ ಕಣ್ಣಮೂಚಿ ಸಿನಿಮಾದ ಫಸ್ಟ್ ಲುಕ್ ನ್ನು ಸಹ ವರಲಕ್ಷ್ಮಿ ಬಿಡುಗಡೆ ಮಾಡಿದ್ದಾರೆ.

ನಟಿ ವರಲಕ್ಷ್ಮಿ ಅವರ ಹೊಸ ಪ್ರಯತ್ನಕ್ಕೆ ದಕ್ಷಿಣ ಭಾರತದ ಚಿತ್ರರಂಗದ ನಿರ್ದೇಶಕರು, ನಟ-ನಟಿಯರು ಶುಭ ಹಾರೈಸಿದ್ದಾರೆ. ನಿರ್ದೇಶಕ ವಿಘ್ನೇಶ್ ಶಿವನ್, ವಿಕ್ರಮ್ ಪ್ರಭು, ಆರ್ಯ, ಸಮಂತ ಅಕ್ಕಿನೇನಿ, ಶ್ರದ್ಧಾ ಶ್ರೀನಾಥ್, ಲಕ್ಷ್ಮಿ ಮಂಚು ಸೇರಿದಂತೆ ಹಲವರು ಕಣ್ಣಮೂಚ್ಚಿ ಚಿತ್ರದ ಫಸ್ಟ್ ಲುಕ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...