![](https://kannadadunia.com/wp-content/uploads/2020/08/96d458a17897af00c368fe327d1e2779373d3d2ce0da92647f11e9ab49728e29.jpg)
ಕ್ರೇಜ್ ಸೃಷ್ಟಿಸೋದರಲ್ಲಿ ದರ್ಶನ್ ಅಭಿಮಾನಿಗಳು ಎತ್ತಿದ ಕೈ. ನೆಚ್ಚಿನ ನಟನಿಗಾಗಿ ಹೊಸ ರೀತಿಯಲ್ಲಿ ಅಭಿಮಾನ ತೋರಿಸುತ್ತಲೆ ಇರ್ತಾರೆ.
ಇದೀಗ ದರ್ಶನ್ ಅಭಿಮಾನಿಯೊಬ್ಬರು ತಾವು ಕಟ್ಟಿಸುತ್ತಿರುವ ಮನೆಗೆ ‘ಡಿ ಬಾಸ್’ ಎಂದು ಹೆಸರಿಟ್ಟು ದರ್ಶನ್ ಅವರ ಮೇಲೆ ಇರುವ ಅಭಿಮಾನವನ್ನು ತೋರಿಸಿದ್ದಾರೆ.
ಈ ಹಿಂದೆಯೂ ಕೂಡ ಚಿತ್ರದುರ್ಗದಲ್ಲಿ ದರ್ಶನ್ ಅಭಿಮಾನಿ ಯೋಗಿ ಎಂಬವರು ತಮ್ಮ ಮನೆಗೆ ‘ಚಾಲೆಂಜಿಂಗ್ ಸ್ಟಾರ್’ ಎಂದು ಹೆಸರಿಟ್ಟಿದ್ದರು. ಆ ಫೋಟೋ ತುಂಬಾನೇ ವೈರಲ್ ಆಗಿತ್ತು. ಇದೀಗ ನಿರ್ಮಾಣ ಹಂತದ ಮನೆಗೆ ‘ಡಿ ಬಾಸ್’ ಎಂದು ಹೆಸರಿಟ್ಟಿರುವ ಫೋಟೋ ಸಾಕಷ್ಟು ವೈರಲ್ ಆಗಿದೆ. ಆದರೆ ಈ ವ್ಯಕ್ತಿಯ ಹೆಸರು ಹಾಗೂ ಊರು ಯಾವುದೆಂದು ಇನ್ನು ತಿಳಿದುಬಂದಿಲ್ಲ