ಎಂದಾದರೂ ಮದ್ಯಪಾನ ಮಾಡಿದ್ದರೆ ನೀವು ಯಾರೆಂಬುದನ್ನು ಮರೆತುಬಿಟ್ಟಿದ್ದೀರಾ..? ಇದ್ಯಾಕೆ ಹೀಗೆ ಕೇಳುತ್ತಿದ್ದೀರಿ ಅಂತಾ ಅಂದುಕೊಳ್ಳುತ್ತಿದ್ದೀರಾ..? ಪ್ರಸಿದ್ಧ ಗಾಯಕಿ ಅಡೆಲೆ ಈ ವರ್ಷದ ಫೆಬ್ರವರಿಯಲ್ಲಿ ಲಂಡನ್ ನೈಟ್ಕ್ಲಬ್ನಲ್ಲಿ ಇದೇ ರೀತಿಯ ಸಮಸ್ಯೆಯನ್ನು ಎದುರಿಸಿದ್ದರು.
ಆಲ್ಕೋಹಾಲ್ ತ್ಯಜಿಸುವುದಾಗಿ ಸಾರ್ವಜನಿಕವಾಗಿ ಘೋಷಿಸಿದ ತಿಂಗಳುಗಳ ನಂತರ, ಹೆವನ್ ನೈಟ್ಕ್ಲಬ್ನ ಪೋರ್ನ್ ಐಡಲ್ ಈವೆಂಟ್ನಲ್ಲಿ ಅಡೆಲೆ ಕುಡಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಡೆಲೆ ಅವರ ಹಲವಾರು ಕ್ಲಿಪ್ಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ಈ ವಿಡಿಯೋ ಟಿಕ್ ಟಾಕ್ ನಲ್ಲಿ ವೈರಲ್ ಆಗಿದೆ. ಮದ್ಯಪಾನ ಸೇವಿಸಿ ತೂರಾಡಿದ್ದಾರೆ. ಕುಡಿದ ಅಮಲಿನಲ್ಲಿ ಆಕೆ ತನ್ನನ್ನು ತಾನೆ ಮರೆತುಬಿಟ್ಟಂತಿದೆ. ಆಕೆಗೆ ತಾನು ಪ್ರಸಿದ್ಧಿ ಪಡೆದಿರುವುದು ಕೂಡ ಬಹುಶಃ ನೆನಪಿಲ್ಲದಂತೆ ತೋರುತ್ತಿದೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಇನ್ಸ್ಟಾಗ್ರಾಮ್ ಲೈವ್ನಲ್ಲಿ, ಅಡೆಲೆ ತಾನು ಮದ್ಯಪಾನವನ್ನು ತ್ಯಜಿಸಿರುವುದಾಗಿ ಹೇಳಿಕೊಂಡಿದ್ದಳು.