
ಹೌದು, ಸಿಎಂ ಯೋಗಿ ಆದಿತ್ಯನಾಥ್ ಅವರ ಟ್ವಿಟ್ ಒಂದಕ್ಕೆ ರಿಪ್ಲೇ ಮಾಡಿರುವ ಕಂಗನಾ, ಭಾರತದಲ್ಲಿ ಟಾಪ್ ಲಿಸ್ಟ್‌ನಲ್ಲಿ ಟಾಲಿವುಡ್ ಚಿತ್ರೋದ್ಯಮ ಇದೆ. ಅದು ಮೊದಲನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ. ಇದಕ್ಕೆ ಉದಾಹರಣೆ ಕೂಡ ನೀಡಿ ರೀಟ್ವಿಟ್ ಮಾಡಿದ್ದಾರೆ.
ಡಬ್ ಆಗುತ್ತಿರುವ ಸಿನಿಮಾಗಳ ಬಗ್ಗೆಯೂ ಮಾತನಾಡಿರುವ ಅವರು, ಅನೇಕ ಸಿನಿಮಾಗಳು ಡಬ್ ಆಗುತ್ತಿವೆ. ಇದನ್ನು ಮೊದಲು ತಪ್ಪಿಸಬೇಕು. ಅದರಿಂದ ನಮ್ಮ ಸಿನಿಮಾಗಳಿಗೆ ಹೆಚ್ಚಿನ ಮಹತ್ವ ಸಿಗಲಿದೆ ಎಂದು ಹೇಳಿದ್ದಾರೆ. ನಮ್ಮ ಸಿನಿಮಾ ಇಂಡಸ್ಟ್ರಿಯನ್ನು ಡಬ್ ಆಗುತ್ತಿರುವುದರಿಂದ ಉಳಿಸಬೇಕಿದೆ ಎಂದಿದ್ದಾರೆ.