alex Certify ಬ್ಯಾಕ್ ಲೆಸ್ ಡ್ರೆಸ್ ನಲ್ಲಿ ಸಖತ್ ಹಾಟ್ ಆಗಿ ಪಿಯಾನೋ ನುಡಿಸಿದ ಶ್ರುತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಕ್ ಲೆಸ್ ಡ್ರೆಸ್ ನಲ್ಲಿ ಸಖತ್ ಹಾಟ್ ಆಗಿ ಪಿಯಾನೋ ನುಡಿಸಿದ ಶ್ರುತಿ

ಕೆಲ ಸಮಯದಿಂದ ಚಿತ್ರರಂಗದಿಂದ ದೂರ ಸರಿದಿದ್ದ ದಕ್ಷಿಣ ಭಾರತದ ಖ್ಯಾತ ನಟಿ ಶ್ರುತಿ ಹಾಸನ್, ಇದೀಗ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಶ್ರುತಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ.

ಶ್ರುತಿ ಹಾಸನ್ ನಟಿ ಮಾತ್ರವಲ್ಲ, ಗಾಯಕಿ ಕೂಡ ಹೌದು. ಸಂಗೀತದಲ್ಲಿ ತುಂಬಾ ಆಸಕ್ತಿ ಹೊಂದಿರುವ ಶ್ರುತಿ, ಇತ್ತೀಚೆಗೆ ಹೊಸ ಪಿಯಾನೋ ಖರೀದಿಸಿದ್ದಾರೆ. ಬ್ಯಾಕ್ ಲೆಸ್ ಡ್ರೆಸ್ ನಲ್ಲಿ ತಾನು ಪಿಯಾನೋ ನುಡಿಸುತ್ತಾ ತಲ್ಲೀನವಾಗಿರುವ ವಿಡಿಯೋವೊಂದನ್ನು ಶ್ರುತಿ ಹಂಚಿಕೊಂಡಿದ್ದು, ವಿಡಿಯೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಪಿಯಾನೋ ವಿಡಿಯೋ ಜೊತೆಗೆ ಕೆಲ ಸಾಲುಗಳನ್ನು ಬರೆದುಕೊಂಡಿರುವ ಶ್ರುತಿ ಹಾಸನ್, ನನ್ನ ಹೊಸ ಸ್ನೇಹಿತೆ ಈ ಪಿಯಾನೋ, ಆಕೆಗೆ ಏನೆಂದು ಹೆಸರಿಡಲಿ…ಲೈರಾ ಎಂದು ಇಡಬಹುದೇ ಎಂದು ಕೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...