
ಹರಿ ಸಂತೋಷ್ ನಿರ್ದೇಶಿಸುತ್ತಿರುವ ‘ಬೈ 2 ಲವ್’ ಎಂಬ ಹೊಸ ಸಿನಿಮಾದಲ್ಲಿ ನಟ ಧನ್ವೀರ್ ಜೊತೆ ಶ್ರೀಲೀಲಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ‘ಬಜಾರ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಧನ್ವೀರ್ ಗೆ ಸಾಕಷ್ಟು ಅಭಿಮಾನಿಗಳ ದಂಡೇ ಇದೆ.
ಇದೊಂದು ರೊಮ್ಯಾಂಟಿಕ್ ಸಿನಿಮಾವಾಗಿದ್ದು, ಕೆವಿಎನ್ ಪ್ರೊಡಕ್ಷನ್ ಹಾಗೂ ಸುಪ್ರೀತ್ ಪ್ರೊಡಕ್ಷನ್ ನಿಂದ ಈ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಜನವರಿ 4ರಿಂದ ಈ ಸಿನಿಮಾ ಚಿತ್ರೀಕರಣ ಶುರುಮಾಡಲು ಚಿತ್ರತಂಡ ಸಜ್ಜಾಗಿದೆ.