alex Certify ‘ಬಾಹುಬಲಿ’ ಬಿಡುಗಡೆಯಾಗಿ ಇಂದಿಗೆ 6 ವರ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬಾಹುಬಲಿ’ ಬಿಡುಗಡೆಯಾಗಿ ಇಂದಿಗೆ 6 ವರ್ಷ

ರಾಜಮೌಳಿ ನಿರ್ದೇಶನದ ಪ್ರಭಾಸ್ ನಟನೆಯ ಸೂಪರ್ ಡೂಪರ್ ಹಿಟ್ ಸಿನಿಮಾ ʼಬಾಹುಬಲಿ:ದಿ ಬಿಗಿನಿಂಗ್ʼ ಬಿಡುಗಡೆಯಾಗಿ ಇಂದಿಗೆ 6 ವರ್ಷಗಳಾಗಿವೆ. ಈ ಸಂತಸವನ್ನು ಪ್ರಭಾಸ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ‍ಹಂಚಿಕೊಂಡಿದ್ದಾರೆ.

2015 ಜುಲೈ 10ರಂದು ಈ ಚಿತ್ರವನ್ನು ರಿಲೀಸ್ ಮಾಡಲಾಗಿತ್ತು. ನಟ ಪ್ರಭಾಸ್ ರನ್ನು ಚಿತ್ರರಂಗದಲ್ಲಿ ಎತ್ತರದ ಸ್ಥಾನಕ್ಕೆ ಕರೆದುಕೊಂಡು ಹೋದಂತ ಸಿನಿಮಾ ಬಾಹುಬಲಿ. ಈ ಚಿತ್ರದ ಮೂಲಕ ಪ್ರಭಾಸ್ ಬೇರೆ ಬೇರೆ ದೇಶಗಳಲ್ಲೂ ಅಭಿಮಾನಿಗಳನ್ನು ಸಂಪಾದಿಸಿದರು. 180 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ 650 ಕೋಟಿ ಕಲೆಕ್ಷನ್ ಮಾಡಿತ್ತು.

ಬಾಲಿವುಡ್ ಗೀತೆ ಜೊತೆ ನಡೀತು ಪೊಲೀಸ್​ ತರಬೇತಿ: ವಿಶೇಷ ವಿಡಿಯೋ ಶೇರ್ ಮಾಡಿದ ಆನಂದ್​ ಮಹೀಂದ್ರಾ

ಅರ್ಕಾ ಮೀಡಿಯಾ ವರ್ಕ್ಸ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದ ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ, ತಮನ್ನಾ, ರಾಣಾ ದಗ್ಗುಬಾಟಿ, ರಮ್ಯಕೃಷ್ಣ, ಸತ್ಯರಾಜ್ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದರು. ಎಂ.ಎಂ. ಕೀರವಾಣಿ ಈ ಚಿತ್ರಕ್ಕೆ ಸಂಗೀತ ನೀಡಿದ್ದರು. ರಾಜಮೌಳಿ ಕುಟುಂಬದ ಬಹಳಷ್ಟು ಮಂದಿ ಈ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ.

https://www.instagram.com/p/CRIh_ATDKUz/?utm_source=ig_web_copy_link

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...