alex Certify ಬಾಡಿ ಬಿಲ್ಡ್ ಮಾಡುವವರಿಗೆ ಇಲ್ಲಿದೆ ಕಿಚ್ಚ ಸುದೀಪ್ ನೀಡಿದ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಡಿ ಬಿಲ್ಡ್ ಮಾಡುವವರಿಗೆ ಇಲ್ಲಿದೆ ಕಿಚ್ಚ ಸುದೀಪ್ ನೀಡಿದ ಟಿಪ್ಸ್

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ’ಫ್ಯಾಂಟಮ್’ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಕೊನೇ ಹಂತದ ಚಿತ್ರೀಕರಣ ಮಾತ್ರ ಬಾಕಿಯಿದೆಯಂತೆ. ಇದಕ್ಕಾಗಿ ಅಭಿನಯ ಚಕ್ರವರ್ತಿ ಮತ್ತೆ ಬಾಡಿ ಬಿಲ್ಡ್ ಮಾಡುತ್ತಿದ್ದಾರಂತೆ.

ಈ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದು, ಮತ್ತೆ ತಾವು ಬಾಡಿ ಬಿಲ್ಡ್ ಮಾಡುತ್ತಿರುವ ಬಗ್ಗೆ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೇ ಕೆಲವೊಂದು ಟಿಪ್ಸ್ ಕೂಡ ನೀಡಿದ್ದಾರೆ.

ಒಳ್ಳೆಯ ಊಟ, ಸ್ವಲ್ಪ ಡೀಸೆಂಟ್ ಲೈಫ್ ಸ್ಟೈಲ್, ಒಂದಷ್ಟು ಶಿಸ್ತು ಇವಿಷ್ಟು ಇದ್ದರೆ ಸಾಕು…..ಫ್ಯಾಂಟಮ್ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ಗಾಗಿ ಹಲವು ದಿನಗಳ ಬಳಿಕ ಮತ್ತೆ ವರ್ಕೌಟ್ ಆರಂಭಿಸಿದ್ದೇನೆ. ಸುಮಾರು ಒಂದು ತಿಂಗಳ ಕಾಲ ಎಲ್ಲರನ್ನೂ ಸುಸ್ತಾಗಿಸುವಂತೆ ನಡೆದ ಚಿತ್ರೀಕರಣದ ಬಳಿಕ ಸ್ವಲ್ಪ ಗ್ಯಾಪ್ ನೀಡಲಾಗಿದ್ದು, ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...