alex Certify ಬರೋಬ್ಬರಿ 6.75 ಲಕ್ಷ ರೂಪಾಯಿಗೆ ಹರಾಜಾಯ್ತು ಎ.ಆರ್.​ ರೆಹಮಾನ್​​ ಡ್ರೆಸ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 6.75 ಲಕ್ಷ ರೂಪಾಯಿಗೆ ಹರಾಜಾಯ್ತು ಎ.ಆರ್.​ ರೆಹಮಾನ್​​ ಡ್ರೆಸ್..!

ಸಂಗೀತ ಮಾಂತ್ರಿಕ ಎ.ಆರ್.​ ರೆಹಮಾನ್​ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಖ್ಯಾತಿಯನ್ನು ಮುಗಿಲೆತ್ತರದವರೆಗೆ ಬೆಳೆಸಿದ್ದಾರೆ.

1992ರಲ್ಲಿ ‘ರೋಜಾ’ ಸಿನಿಮಾದ ಮೂಲಕ ಸಂಗೀತ ಸಂಯೋಜಕರಾಗಿ ಪಾದಾರ್ಪಣೆ ಮಾಡಿದ ಎ.ಆರ್​. ರೆಹಮಾನ್ ಬಳಿಕ 2 ಆಸ್ಕರ್​ ಪ್ರಶಸ್ತಿಗಳನ್ನು ಬಾಚಿಕೊಳ್ಳುವವರೆಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಇದೇ ಕಾರಣಕ್ಕಾಗಿಯೇ ಇದೀಗ ಎ.ಆರ್.​ ರೆಹಮಾನ್​ ಧರಿಸಿದ್ದ ಧಿರಿಸೊಂದು ಬರೋಬ್ಬರಿ 6.75 ಲಕ್ಷ ರೂಪಾಯಿಗಳಿಗೆ ಮಾರಾಟವಾಗಿದೆ.

ರಾಜಸ್ಥಾನ ಕಾಸ್ಮೋ ಕ್ಲಬ್ ಫೌಂಡೇಶನ್‌ನ 28 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವು ಇತ್ತೀಚೆಗೆ ಆಳ್ವಾರ್‌ಪೇಟೆ ಮ್ಯೂಸಿಕ್ ಅಕಾಡೆಮಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಮಿಳುನಾಡು ಕೈಮಗ್ಗ ಸಚಿವ ಆರ್.ಗಾಂಧಿ ಅವರು ಒಂದು ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿದರು.

ಕಾರ್ಯಕ್ರಮದ ಅಂಗವಾಗಿ, ಬಟ್ಟೆ ಖರೀದಿಸಲು ಸಾಧ್ಯವಾಗದವರಿಗೆ ಸಹಾಯ ಮಾಡುವ ಯೋಜನೆಯಡಿ ಎ.ಆರ್. ರೆಹಮಾನ್ ಬಳಸಿದ ಡ್ರೆಸ್ ಅನ್ನು 6.75 ಲಕ್ಷ ರೂ.ಗೆ ಹರಾಜು ಮಾಡಲಾಯಿತು. ಪ್ರಮೋದ್ ಸುರಾಡಿಯಾ ಎಂಬುವವರು ಈ ಉಡುಪನ್ನು ಹರಾಜಿನಲ್ಲಿ ಖರೀದಿಸಿದ್ದಾರೆ.
ಎ.ಆರ್.​ ರೆಹಮಾನ್​ ನಟ ಹಾಗೂ ನಿರ್ದೇಶಕ ಪಾರ್ತಿಬನ್​​ ಮುಂಬರುವ ಸಿನೆಮಾ ‘ಇರಾವಿನ್​ ನಿಜಲ್’​​ಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...