alex Certify ಪ್ರೇಮ್ ʼಅಮ್ಮನ ತೋಟʼಕ್ಕೆ ಹೊಸ ಅತಿಥಿಗಳ ಆಗಮನ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೇಮ್ ʼಅಮ್ಮನ ತೋಟʼಕ್ಕೆ ಹೊಸ ಅತಿಥಿಗಳ ಆಗಮನ..!

ನಿರ್ದೇಶಕ ಪ್ರೇಮ್ ಏಕ್‌ಲವ್ಯ ಸಿನಿಮಾ ಶೂಟಿಂಗ್‌ಗಾಗಿ ಲೊಕೇಷನ್ ಹುಡುಕಾಟದಲ್ಲಿದ್ದಾರೆ. ಲಾಕ್‌ಡೌನ್ ನಂತರ ಸಿನಿಮಾ ಶೂಟಿಂಗ್‌ಗೆ ಅವಕಾಶ ನೀಡಿದ್ದ ಬೆನ್ನಲ್ಲೇ ಒಂದಿಷ್ಟು ಚಂದದ ಲೊಕೇಷನ್‌ಗಾಗಿ ಸರ್ಚ್ ಮಾಡುತ್ತಿದ್ದಾರೆ. ಹೀಗೆ ಲೊಕೇಷನ್ ನೋಡಲು ಇವರು ಗುಜರಾತ್‌ನ ಕಚ್‌ಗೂ ಹೋಗಿದ್ದರು.

ಲೊಕೇಷನ್ ಹುಡುಕಾಟದ ಸಂದರ್ಭದಲ್ಲಿ ಇವರ ಕಣ್ಣಿಗೆ ಬಿದ್ದಿದ್ದು ಎಮ್ಮೆ. ಆ ಎಮ್ಮೆ ಇವರ ಮನಸೆಳೆದಿದೆ. ಹೀಗಾಗಿ ಆ ಎಮ್ಮೆ ಹಾಗೂ ಅದರ ಕರುವನ್ನು ತಮ್ಮ ಅಮ್ಮನ ತೋಟಕ್ಕೆ ಕರೆ ತಂದಿದ್ದಾರೆ ಪ್ರೇಮ್. ಅಷ್ಟೆ ಅಲ್ಲ ಆ ಎಮ್ಮೆ ಹಾಗೂ ಅದರ ಕರುವಿಗೆ ನಾಮಕರಣ ಕೂಡ ಮಾಡಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕರುವಿನ ಎರಡು ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಈ ಫೋಟೋದಲ್ಲಿ ಪ್ರೇಮ್ ಹಾಗೂ ಪ್ರೇಮ್ ಪುತ್ರ ಕರುವನ್ನು ಅಪ್ಪಿಕೊಂಡು ಖುಷಿಯಾಗಿದ್ದಾರೆ. ಜೊತೆಗೆ ಈ ಬಗ್ಗೆ ಬರೆದುಕೊಂಡಿರುವ ಪ್ರೇಮ್, ಏಕ್‌ಲವ್ಯ ಶೂಟ್ಗೆ ಲೋಕೇಷನ್ ನೋಡಕ್ಕೆ ಗುಜರಾತ್‌ನ ಕಚ್ಗೆ ಹೋಗಿದ್ದೆ, ಅಲ್ಲಿ ಒಂದ್ ಎಮ್ಮೆನ ನೋಡ್ದೆ, ತುಂಬಾ ಇಷ್ಟ ಆಯ್ತು, ಯಾಕ್ ಇದುನ್ನ ಅಮ್ಮನ ತೋಟಕ್ ತಗೊಂಡ್ ಹೋಗ್ಬಾರ್ದು ಅಂತ ಅನ್ಕೊಂಡೆ, ಡಿಸೈಡ್ ಮಾಡ್ದೆ, 2000ಕಿ.ಮೀ. ಜೊತೇಲಿ ಕರ್ಕೊಂಡ್ ಬಂದೆ, ತಾಯಿಗೆ ಮಂಡೋದರಿ ಮಗಳಿಗೆ ಭೈರವಿ ಅಂತ ಹೆಸರಿಟ್ಟೆ. ಅಲ್ಲಿಗೆ ಅಮ್ಮನ ತೋಟಕ್ಕೆ ಹೊಸ ಅತಿಥಿ ಎಂಟ್ರಿ ಆದ್ರು ಎಂದು ಹೃದಯದ ಸಿಂಬಲ್ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...