alex Certify ಪೊಲೀಸರಿಂದ KGF ಮಾದರಿ ಬೈಕ್ ಸೀಜ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸರಿಂದ KGF ಮಾದರಿ ಬೈಕ್ ಸೀಜ್…!

ಕೆಜಿಎಫ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಬಳಸಿದ್ದ ರಾಕಿ ಹೆಸರಿನ ಬೈಕ್ ಯುವ ಜನತೆಯಲ್ಲಿ ಹೊಸ ಕ್ರೇಜ್ ಹುಟ್ಟಿಸಿದ್ದಲ್ಲದೇ ಯಶ್ ಅಭಿಮಾನಿಗಳಿಗೆ ಈ ಬೈಕ್ ದೊಡ್ಡ ಆಕರ್ಷಣೆಯಾಗಿತ್ತು.

ಹೊಸಕೋಟೆಯ ಯಶ್ ಅಭಿಮಾನಿಗಳು ಬೈಕೊಂದನ್ನು ಕೆಜಿಎಫ್ ಚಿತ್ರದಲ್ಲಿದ್ದಂತೆ ರೆಡಿ ಮಾಡಿಸಿದ್ದು, ಈ ಬೈಕನ್ನು ಪೊಲೀಸರು ಈಗ ಸೀಜ್ ಮಾಡಿದ್ದಾರೆ.

ಅಷ್ಟಕ್ಕೂ ಈ ಘಟನೆಗೆ ಕಾರಣವಾಗಿದ್ದು, ಹೊಸಕೋಟೆ ಯಶ್ ಅಭಿಮಾನಿಗಳ ಸಂಘದ ಕಾರ್ಯದರ್ಶಿ ಸುನಿಲ್ ಮಾಡಿದ ಎಡವಟ್ಟು. ಸುನಿಲ್ ಮತ್ತವರ ಸ್ನೇಹಿತರು ಈ ಬೈಕ್ ನಲ್ಲಿ ಜೋರು ಸೌಂಡ್ ಮಾಡಿಕೊಂಡು ವೀಲಿಂಗ್ ಮಾಡಿಕೊಂಡು ಹೋಗಿದ್ದಾರೆ. ಈ ವೇಳೆ ಕೆಆರ್ ಪುರಂ ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಪೊಲೀಸರು ಬೈಕ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...