alex Certify ಪುತ್ರಿಯನ್ನು ಭೇಟಿಯಾಗಲು ನಡುರಾತ್ರಿ ಬಂದ ರಾಗಿಣಿ ಪೋಷಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುತ್ರಿಯನ್ನು ಭೇಟಿಯಾಗಲು ನಡುರಾತ್ರಿ ಬಂದ ರಾಗಿಣಿ ಪೋಷಕರು

ಡ್ರಗ್ಸ್‌ ಪ್ರಕರಣದಲ್ಲಿ ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಗಿಣಿ ಗೆಳೆಯ ರವಿಶಂಕರ್‌ ವಿಚಾರಣೆ ಸಂದರ್ಭದಲ್ಲಿ ಬಾಯ್ಬಿಟ್ಟ ಸಂಗತಿಗಳನ್ನು ಆಧರಿಸಿ ನಟಿ ಬಂಧನವಾಗಿದೆ ಎಂದು ಹೇಳಲಾಗಿದ್ದು, ಈಗ ಆಕೆಯನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿರಿಸಲಾಗಿದೆ.

ಜಾಮೀನು ಕೋರಿ ರಾಗಿಣಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸೋಮವಾರ ನಡೆಯಲಿದ್ದು, ಅಲ್ಲಿಯವರೆಗೂ ರಾಗಿಣಿ ಸಂಕಷ್ಟ ಮುಂದುವರೆಯಲಿದೆ. ನ್ಯಾಯಾಲಯದಲ್ಲಿ ಜಾಮೀನು ಸಿಕ್ಕರೆ ಮಾತ್ರ ರಾಗಿಣಿಗೆ ಬಿಡುಗಡೆ ಭಾಗ್ಯ ಸಿಗಲಿದ್ದು, ಇಲ್ಲವಾದರೆ ಜೈಲು ವಾಸ ಮುಂದುವರೆಯಲಿದೆ.

ಬಂಧನಕ್ಕೊಳಗಾಗಿರುವ ರಾಗಿಣಿ ಈಗ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದು, ಆಕೆಯನ್ನು ಮಧ್ಯ ರಾತ್ರಿ ಭೇಟಿಯಾಗಲು ಬಂದಿದ್ದ ಪೋಷಕರು ಅವಕಾಶ ಸಿಗದ ಕಾರಣ ನಿರಾಸೆಯಿಂದ ಹಿಂದಿರುಗಿದ್ದಾರೆ. ರಾಗಿಣಿ ತಾಯಿ ರೋಹಿಣಿ ಹಾಗೂ ತಂದೆ ರಾಕೇಶ್‌ ತಮ್ಮ ಪುತ್ರಿಗಾಗಿ ಪಾಸ್ತಾ, ನೀರಿನ ಬಾಟಲ್‌ ನೀಡಲು ಬಂದಿದ್ದು, ಆದರೆ ಅವರಿಗೆ ಅವಕಾಶ ನಿರಾಕರಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೊಲೀಸರು ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯವನ್ನು ಕೋರುವ ನಿರೀಕ್ಷೆಯಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...