ಪ್ರಭುದೇವ ನಿರ್ದೇಶನದ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷೆಯ ‘ರಾಧೆ’ ಚಿತ್ರದ ಟ್ರೈಲರ್ ಅನ್ನು ನಾಳೆ ಜೀ ಸ್ಟುಡಿಯೋಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ, ಈ ಕುರಿತು ಸಲ್ಮಾನ್ ಖಾನ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಟ್ರೈಲರ್ ವೀಕ್ಷಿಸಲು ಇಷ್ಟು ದಿನ ಕಾತುರದಿಂದ ಕಾಯುತ್ತಿದ್ದ ಸಲ್ಮಾನ್ ಖಾನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ.
ಫನ್ನಿ ವಿಡಿಯೋ ಮೂಲಕ ಅಭಿಮಾನಿಗಳ ಮನಗೆದ್ದ ನಟಿ ಜಾನ್ವಿ ಕಪೂರ್
ಆಕ್ಷನ್, ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಮೇ 13ರಂದು ಬಿಡುಗಡೆ ಮಾಡಲಿದ್ದಾರೆ, ಸಲ್ಮಾನ್ ಖಾನ್ ಸೇರಿದಂತೆ ಜಾಕಿ ಶ್ರಾಫ್, ದಿಶಾ ಪಟಾನಿ, ರಣದೀಪ್ ಹೂಡಾ, ಮೇಘಾ ಆಕಾಶ್ ಮೊದಲಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
https://www.instagram.com/p/CN7DJSPlfh1/?utm_source=ig_web_copy_link