alex Certify ನನ್ನ ಜೀವನ – ನನ್ನ ಇಷ್ಟ ಕೇಳಲು ನೀವ್ಯಾರು ಎಂದ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನನ್ನ ಜೀವನ – ನನ್ನ ಇಷ್ಟ ಕೇಳಲು ನೀವ್ಯಾರು ಎಂದ ನಟ

ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ನೆಟ್ಟಿಗರ ವಿರುದ್ಧ ಗರಂ ಆಗಿದ್ದು, ಮಾಡಲು ಬೇರೆ ಕೆಲಸವಿಲ್ಲವೇ ಎಂದು ಕಿಡಿಕಾರಿದ್ದಾರೆ.

ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ರಣವೀರ್ ಸಿಂಗ್ ವಿಭಿನ್ನ ರೀತಿಯ ಕಾಸ್ಟ್ಯೂಮ್ ಧರಿಸಿ, ಹೊಸ ಬಗೆಯ ಹೇರ್ ಸ್ಟೈಲ್ ಗಳ ಮೂಲಕ ಹಾಗೂ ವಿಚಿತ್ರವಾದ ವಿಡಿಯೋಗಳನ್ನು ಪೋಸ್ಟ್ ಮಾಡಿ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದಕ್ಕೆ ರಣವೀರ್ ಅವರ ಈ ವಿಭಿನ್ನತೆಗೆ ಆಗಾಗ ಸಿಕ್ಕಾಪಟ್ಟೆ ಟ್ರೋಲ್ ಗೊಳಗಾಗುವುದೂ ಇದೆ.

ಅಂತೆಯೇ ಇದೀಗ ರಣವೀರ್ ಸಿಂಗ್ ತಾವು ಕಾರಲ್ಲಿ ಕುಳಿತು ಹಾಡುಗಳನ್ನು ಕೇಳುತ್ತಾ ಎಂಜಾಯ್ ಮಾಡುತ್ತಾ ಹೋಗುತ್ತಿದ್ದ ವಿಡಿಯೋ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಗೆ ನೆಟ್ಟಿಗರು ಜೋಕರ್ ತರಹ ಕಾಣುತ್ತೀದ್ದೀರಾ, ಮ್ಯೂಸಿಕ್ ಆಫ್ ಮಾಡಿ ಎಂದು ಟ್ರೋಲ್ ಮಾಡಿದ್ದಾರೆ. ಇದರಿಂದ ಗರಂ ಆದ ರಣವೀರ್ ಸಿಂಗ್, ನನ್ನ ಜೀವನ ನನ್ನ ಇಷ್ಟ, ನಿಮಗೆ ಮಾಡಲು ಬೇರೆ ಕೆಲಸಗಳಿಲ್ಲವೇ…? ನನ್ನ ಜೀವನದ ಬಗ್ಗೆ ಹೇಳಲು ನೀವು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...