
ನಟ ಮಹೇಶ್ ಬಾಬು ಆಗಸ್ಟ್ 9 ರಂದು 45ನೇ ವಸಂತಕ್ಕೆ ಕಾಲಿಟ್ಟಿದ್ದು, ಆ ದಿನ ಅವರ ಅಭಿಮಾನಿಗಳು ಹಾಗೂ ಸಾಕಷ್ಟು ಸೆಲೆಬ್ರಿಟಿಗಳು ಹುಟ್ಟು ಹಬ್ಬದ ಶುಭಾಶಯ ಕೋರಿದ್ದರು.
ಆದರೆ ನಟ ವಿಜಯ್ ದೇವರಕೊಂಡ ಅವರು ಮಹೇಶ್ ಬಾಬು ಅವರಿಗೆ ವಿಶ್ ಮಾಡದೇ ಇರುವುದು ಮಹೇಶ್ ಬಾಬು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಮಹೇಶ್ ಬಾಬು ಅಭಿಮಾನಿ ನಾನು ಅಂದಿದ್ದ ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿಲ್ಲ ಎಂದು ಟ್ರೋಲ್ ಮಾಡುವ ಮೂಲಕ ಮಹೇಶ್ ಬಾಬು ಅಭಿಮಾನಿಗಳು ಕೋಪ ವ್ಯಕ್ತಪಡಿಸಿದ್ದಾರೆ.