alex Certify ನಟಿ ಸಮಂತಾ ʼಹೆಲ್ತ್ ಟಿಪ್ಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಸಮಂತಾ ʼಹೆಲ್ತ್ ಟಿಪ್ಸ್ʼ

ಸದಾ ಒಂದಿಲ್ಲೊಂದು ಚಿತ್ರಗಳಲ್ಲಿ ಬ್ಯುಸಿ ಆಗಿರುವ ನಟಿ ಸಮಂತಾ. ಕೊರೋನಾ ಬಂದ ಬಳಿಕ ಒಂದಷ್ಟು ಸಮಯ ಮನೆಯಲ್ಲೇ ಕಳೆಯುವಂತಾದಾಗ ಕೆಲವು ಟಿಪ್ಸ್ ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

ನೀವು ಎಷ್ಟು ಖುಷಿಯಾಗಿ ಇರುತ್ತೀರೋ, ಅಷ್ಟು ಸಮಯ ಯಂಗ್ ಆಗಿ ಆಕರ್ಷಕವಾಗಿ ಕಾಣುತ್ತೀರಿ. ಆರೋಗ್ಯ ಸಮಸ್ಯೆಯೂ ನಿಮ್ಮನ್ನು ಹೆಚ್ಚು ಕಾಡುವುದಿಲ್ಲ ಎಂದಿರುವ ಸಮಂತಾ ಒಂದು ದಿನವೂ ಯೋಗ ಹಾಗೂ ವ್ಯಾಯಾಮವನ್ನು ಮಿಸ್ ಮಾಡಿಕೊಳ್ಳುವುದಿಲ್ಲವಂತೆ.

ಮನೆಗೆ ಬೇಕಾದಷ್ಟು ತರಕಾರಿಗಳನ್ನು ಮನೆಯಂಗಳದಲ್ಲೇ ಬೆಳೆಯುವ ಸಮಂತಾ ಅದಕ್ಕಾಗಿ ಹೈಡ್ರೋಫೋನಿಕ್ ವಿಧಾನವನ್ನು ಅನುಸರಿಸುತ್ತಾರಂತೆ. ಮನೆಯಲ್ಲಿ ತರಕಾರಿ ಬೆಳೆಯುವುದು ಮನಸ್ಸಿಗೂ ಮುದ ನೀಡುವ ಸಂಗತಿ ಹಾಗೂ ವ್ಯರ್ಥವಾಗಿ ಕಳೆಯುವ ಸಮಯವನ್ನು ಸದುಪಯೋಗ ಪಡಿಸಿಕೊಂಡಂತೆಯೂ ಅಗುತ್ತದೆ ಎನ್ನುತ್ತಾರವರು.

ಸಮಂತಾ ಬೆಳಗೆದ್ದು ಖಾಲಿ ಹೊಟ್ಟೆಗೆ ಹಣ್ಣುಗಳನ್ನು ಸೇವಿಸುತ್ತಾರಂತೆ ಇದೇ ನನ್ನ ಆರೋಗ್ಯದ ಒಳಗುಟ್ಟು ಎನ್ನುತ್ತಾರೆ ಸಮಂತಾ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...