alex Certify ನಟಿ ರಚಿತಾ ರಾಮ್ ಆಸೆ ಏನು ಗೊತ್ತಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ರಚಿತಾ ರಾಮ್ ಆಸೆ ಏನು ಗೊತ್ತಾ…!

ʼಬುಲ್ ಬುಲ್ʼ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ರಚಿತಾ ರಾಮ್, ಇಡೀ ಕನ್ನಡ ಸಿನಿಮಾ ರಂಗದಲ್ಲೇ ದೊಡ್ಡ ಮಟ್ಟದ ಹೆಸರು ಮಾಡಿದರು. ಡಿಂಪಲ್ ಕ್ವೀನ್ ಈ ಸಿನಿಮಾ ನಂತರ ಮಾಡಿದ್ದ ಸಿನಿಮಾಗಳೆಲ್ಲವೂ ಹಿಟ್ ಆಗಿವೆ. ಇಷ್ಟಾದರೂ ಈ ನಟಿ ಇದೀಗ ಮತ್ತೊಂದು ದೊಡ್ಡ ಸಾಹಸಕ್ಕೆ ಕೈ ಹಾಕಲು ಮುಂದಾಗಿದ್ದಾರೆ.

ಹೌದು, ರಚಿತಾ ರಾಮ್ ನಿರ್ಮಾಪಕಿಯಾಗುವ ಕನಸು ಹೊತ್ತಿದ್ದಾರೆ. ಈಗಾಗಲೇ ಇದರ ಮೊದಲ ಹಂತವಾಗಿ ರಿಷಭಪ್ರಿಯ ಎಂಬ ಶಾರ್ಟ್ ಸಿನಿಮಾ ಕೂಡ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ನಿರ್ಮಾಪಕಿಯಾಗುವ ಕನಸು ಹೊತ್ತು ಮುಂದೆ ಸಾಗುತ್ತಿದ್ದಾರೆ ಈ ನಟಿ. ತಮ್ಮ ಬ್ಯಾನರ್‌ನಲ್ಲೇ ಸಿನಿಮಾ ಬರಬೇಕು ಎಂಬ ಕನಸಿನ ಜೊತೆ ಮತ್ತೊಂದು ಮಹದಾಸೆ ಹೊಂದಿದ್ದಾರಂತೆ.

ಅದೇನೆಂದರೆ ತಮ್ಮ ಬ್ಯಾನರ್‌ನಲ್ಲಿ ಬರುವ ಮೊದಲ ಸಿನಿಮಾದಲ್ಲಿ ನಾಯಕ ನಟನಾಗಿ ದರ್ಶನ್ ಇರಬೇಕಂತೆ. ತಮಗೆ ಚಿತ್ರರಂಗದಲ್ಲಿ ಅವಕಾಶ ಕೊಟ್ಟ ದರ್ಶನ್ ಅವರಿಗೆ ಋಣ ತೀರಿಸುವ‌ ಸಲುವಾಗಿ ಈ ಕೆಲಸ ಮಾಡುತ್ತಿದ್ದಾರೆ ರಚಿತಾ ರಾಮ್. ಸದ್ಯ ಸಾಲು ಸಿನಿಮಾಗಳು ರಚಿತಾ ರಾಮ್ ಕೈಯಲ್ಲಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...