
ಬಾಲಿವುಡ್ ನಟಿ ಚಿತ್ರಾಂಗದೆ ತಮ್ಮ ಸೌಂದರ್ಯದ ಒಳಗುಟ್ಟುಗಳನ್ನು ಬಿಚ್ಚಿಟ್ಟಿದ್ದಾರೆ. ತನ್ನ ಕೂದಲು ಹೀಗೆ ಹೊಳೆಯಲು ಮತ್ತು ಆಕರ್ಷಕವಾಗಿ ಕಾಣಲು ತೆಂಗಿನೆಣ್ಣೆ ಕಾರಣ ಎಂಬುದನ್ನು ವಿವರಿಸಿದ್ದಾರೆ.
ಹುಡುಗಿಯರಿಗೆ ತಮ್ಮ ಕೂದಲು ನೀಳವಾಗಿ ಹೊಳಪಿನಿಂದ ಕೂಡಿರಬೇಕು ಎಂಬ ಬಯಕೆ ಇರುತ್ತದೆ. ಮಳೆಗಾಲದಲ್ಲಿ ಕೂದಲು ಹೆಚ್ಚಿನ ಕಾಳಜಿ ಮತ್ತು ಗಮನ ಬಯಸುತ್ತದೆ. ನನ್ನ ಕೂದಲಿಗೆ ತೆಂಗಿನಕಾಯಿ ಆಧರಿತ ಎಣ್ಣೆ ಅಳವಾದ ಕಂಡಿಷನಿಂಗ್ ಮತ್ತು ಪೋಷಣೆ ನೀಡುತ್ತದೆ. ಹವಾಮಾನ ಪರಿಸ್ಥಿತಿಗೆ ತಕ್ಕಂತೆ ತಾನು ಇದನ್ನು ಬಳಸುತ್ತಿದ್ದೇನೆ ಎಂದು ಚಿತ್ರಾಂಗದ ಇತ್ತೀಚೆಗೆ ತಿಳಿಸಿದ್ದಾರೆ.
ಜಾಹಿರಾತುಗಳಲ್ಲೂ ಕಾಣಿಸಿಕೊಳ್ಳುವ ಚಿತ್ರಾಂಗದ, ಗ್ಲಾಮರ್ ಉದ್ಯಮದಲ್ಲಿ ಮಿಂಚುವಾಗ ವಿವಿಧ ಹೇರ್ ಸ್ಟೈಲ್ಲಿಂಗ್ ಉತ್ಪನ್ನಗಳು ಮತ್ತು ಚಿಕಿತ್ಸೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಭಿನ್ನ ಭಿನ್ನವಾಗಿ ಕಾಣಿಸಲೆಂದು ಹಲವು ವಿಧದ ಚಿಕಿತ್ಸೆಗಳನ್ನು ನೀಡುತ್ತಾರೆ. ಆದರೆ ಎಲ್ಲದರ ಕೊನೆಗೆ ತೆಂಗಿನಕಾಯಿ ಆಧರಿತ ಎಣ್ಣೆಯೇ ನನ್ನ ಕೂದಲಿಗೆ ವಿಶೇಷ ಹೊಳಪು ಮತ್ತು ರಕ್ಷಣೆ ನೀಡುತ್ತದೆ ಎಂದು ನಾನು ನಂಬಿದ್ದೇನೆ ಎಂದಿದ್ದಾರೆ.
ಮಾನ್ಸೂನ್ನಲ್ಲಿ ನಿಮ್ಮ ಕೂದಲನ್ನು ಹೆಚ್ಚು ಸ್ವಚ್ಛವಾಗಿ ಇರಿಸಿಕೊಳ್ಳಿ ಎಂದು ಹೇಳಿದ್ದಾರೆ