alex Certify ನಗ್ನ ಓಟ: ಮಾಡೆಲ್ ಮಿಲಿಂದ್ ಸೋಮನ್ ವಿರುದ್ಧವೂ ದಾಖಲಾಯ್ತು ಪ್ರಕರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗ್ನ ಓಟ: ಮಾಡೆಲ್ ಮಿಲಿಂದ್ ಸೋಮನ್ ವಿರುದ್ಧವೂ ದಾಖಲಾಯ್ತು ಪ್ರಕರಣ

ಗೋವಾ: ಗೋವಾ ಬೀಚ್ ನಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ನಟಿ ಪೂನಂ ಪಾಂಡೆಯನ್ನು ಪೊಲೀಸರು ಬಂಧಿಸಿದ್ದರು. ಇದರ ಬೆನ್ನಲ್ಲೇ ಇದೀಗ ಖ್ಯಾತ ಮಾಡೆಲ್ ಹಾಗೂ ನಟ ಮಿಲಿಂದ್ ಸೋಮನ್ ವಿರುದ್ಧವೂ ಗೋವಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇತ್ತೀಚೆಗೆ 55ನೇ ವಸಂತಕ್ಕೆ ಕಾಲಿಟ್ಟ ಮಿಲಿಂದ್ ಸೋಮನ್, ಗೋವಾ ಬೀಚ್ ನಲ್ಲಿ ನಗ್ನವಾಗಿ ಓಡಿ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದರು. ಈ ಕುರಿತ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲೂ ಶೇರ್ ಮಾಡಿದ್ದರು. ಗೋವಾ ಸುರಕ್ಷಾ ಮಂಚ್ ಮಿಲಿಂದ್ ವಿರುದ್ಧ ದೂರು ದಾಖಲಿಸಿತ್ತು. ಅಲ್ಲದೇ ಪೋನಂ ಪಾಂಡೆಯನ್ನು ಬಂಧಿಸಿದ್ದ ಪೊಲೀಸರು ಮಿಲಿಂದ್ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನೆಟ್ಟಿಗರು ಗೋವಾ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಕಿಡಿಕಾರಿದ್ದರು.

ಇದೀಗ ಮಿಲಿಂದ್ ವಿರುದ್ಧವೂ ಗೋವಾ ಪೊಲೀಸರು ಪ್ರಕರಣ ದಾಖಲಿಸಿದ್ದು, ಐಪಿಸಿ ಸೆಕ್ಷನ್ 294 ಹಾಗೂ 67ರ ಅಡಿ ಕೇಸ್ ದಾಖಲಿಸಿರುವುದಾಗಿ ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...