alex Certify ದಳಪತಿ ವಿಜಯ್ ಜೊತೆ ನಟಿಸ್ತಾರಾ ರಶ್ಮಿಕಾ ಮಂದಣ್ಣ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಳಪತಿ ವಿಜಯ್ ಜೊತೆ ನಟಿಸ್ತಾರಾ ರಶ್ಮಿಕಾ ಮಂದಣ್ಣ..!

‘ಕಿರಿಕ್ ಪಾರ್ಟಿ’ ಮೂಲಕ ಕನ್ನಡದಲ್ಲಿ ಧೂಳೆಬ್ಬಿಸಿ ಬೇರೆ ಭಾಷೆಯಲ್ಲಿಯೂ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡಿದ್ದಾರೆ. ಕೊರೊನಾದಿಂದಾಗಿ ಸಿನಿಮಾ ಶೂಟಿಂಗ್ ಸ್ಥಗಿತಗೊಂಡಿದ್ದರಿಂದ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗುತ್ತಿಲ್ಲ. ಇದೆಲ್ಲದರ ನಡುವೆ ಇದೀಗ ರಶ್ಮಿಕಾ ಹೊಸದೊಂದು ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ.

ಹೌದು, ದಳಪತಿ ವಿಜಯ್ ಜೊತೆ ನಟಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ ಎನ್ನಲಾಗಿದೆ. ಎ.ಆರ್. ಮುರುಗದಾಸ್ ಅವರು ನಿರ್ದೇಶನದ ಮಾಡುತ್ತಿರುವ ಸಿನಿಮಾದಲ್ಲಿ ಈ ನಟಿ ನಟಿಸುತ್ತಾರೆ ಎನ್ನಲಾಗಿದೆ. ಮುರುಗದಾಸ್ ಅವರ ಹೊಸ ಸಿನಿಮಾದಲ್ಲಿ ದಳಪತಿ ವಿಜಯ್ ನಾಯಕ ನಟನಾಗಿ ನಟಿಸಲಿದ್ದು ವಿಜಯ್‌ಗೆ ನಾಯಕಿಯಾಗಿ ರಶ್ಮಿಕಾ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಈ ಸಿನಿಮಾ ತುಪ್ಪಕ್ಕಿ ಸಿನಿಮಾದ ಸೀಕ್ವೆಲ್ ಎಂದು ಹೇಳಲಾಗುತ್ತಿದೆ. ಮುರುಗದಾಸ್ ಹಾಗೂ ಸನ್ ಪಿಕ್ಚರ್ಸ್ ಸಿನಿಮಾ ಮಾಡುತ್ತಿದ್ದಾರೆ‌. ಸಿನಿಮಾ ತಂಡ ನಾಯಕಿಯನ್ನು, ಉಳಿದ ತಾರಾಗಣವನ್ನು ಇನ್ನೂ ಫೈನಲ್ ಮಾಡಿಲ್ಲ. ಮತ್ತೊಂದು ಮೂಲದ ಪ್ರಕಾರ ಕಾಜಲ್ ಅಗರ್‌ವಾಲ್ ಕೂಡ ಈ ಸಿನಿಮಾ ನಾಯಕಿಯಾಗಲಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...