
ಊರ್ವಶಿ ಉತ್ತಮ ನಟಿ ಮಾತ್ರವಲ್ಲ ಫ್ಯಾಶನ್ ಐಕಾನ್ ಎಂಬುದು ಎಲ್ಲರಿಗೂ ಗೊತ್ತು. ಅರಬ್ ಫ್ಯಾಶನ್ ವೀಕ್ ನಲ್ಲಿ ಊರ್ವಶಿ ಅಭಿನಯದ ಶಾರ್ಟ್ ಫಿಲ್ಮ್ ಬಿಡುಗಡೆ ಮಾಡಲಾಗಿದೆ. ಈ ಚಿತ್ರದಲ್ಲಿ ಊರ್ವಶಿ ಈಜಿಫ್ಟ್ ರಾಣಿ ಕ್ಲಿಯೋಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದ್ರಲ್ಲಿ ಅವ್ರು ಸುಂದರವಾಗಿ ಕಾಣ್ತಿದ್ದಾರೆ.
ಊರ್ವಶಿ ಚಿತ್ರಕ್ಕಾಗಿ ಧರಿಸಿದ ಉಡುಪಿನ ಬೆಲೆ ಕೇಳಿದ್ರೆ ದಂಗಾಗುತ್ತೆ. ಊರ್ವಶಿ ಧರಿಸಿದ್ದ ಬಟ್ಟೆಯನ್ನು ಚಿನ್ನದಿಂದ ಮಾಡಲಾಗಿದೆ. ಈ ಡ್ರೆಸ್ ಬೆಲೆ 37 ಕೋಟಿ ರೂಪಾಯಿ ಮೌಲ್ಯದ್ದು ಎನ್ನಲಾಗಿದೆ. ಊರ್ವಶಿ ಸದಾ ಸುದ್ದಿಯಲ್ಲಿರುತ್ತಾರೆ. ಊರ್ವಶಿ ನೇಹಾ ಕಕ್ಕರ್ ಮದುವೆ ಸಂದರ್ಭದಲ್ಲಿ 55 ಲಕ್ಷ ಮೌಲ್ಯದ ಲೆಹಂಗಾ ಧರಿಸಿದ್ದರು.