alex Certify ಡ್ರಗ್ಸ್ ವಿಚಾರದಿಂದ ಬೆಚ್ಚಿಬಿದ್ದಿದೆ ‘ಸ್ಯಾಂಡಲ್ ವುಡ್’ ಚಿತ್ರರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರಗ್ಸ್ ವಿಚಾರದಿಂದ ಬೆಚ್ಚಿಬಿದ್ದಿದೆ ‘ಸ್ಯಾಂಡಲ್ ವುಡ್’ ಚಿತ್ರರಂಗ

ಎನ್​ಸಿಬಿ ( ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಅಧಿಕಾರಿಗಳು ಬೆಂಗಳೂರಿನಲ್ಲಿ ನಡೆಸಿದ್ದ ದಾಳಿಯಲ್ಲಿ ಬೃಹತ್ ಡ್ರಗ್ಸ್ ಜಾಲವವನ್ನು ಪತ್ತೆ ಹಚ್ಚಿದ್ದು, ಬಂಧಿತ ಡ್ರಗ್ಸ್ ಡೀಲರ್ ಗಳು ಸ್ಯಾಂಡಲ್ ವುಡ್ ನ ಕೆಲ ಕಲಾವಿದರ ಬಗ್ಗೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾರೆ.

ಕಲ್ಯಾಣನಗರದ ರಾಯಲ್ ಸೂಟ್ಸ್ ಹೋಟೆಲ್ ಅಪಾರ್ಟ್ಮೆಂಟ್, ಥಣಿಸಂದ್ರದ ನಿಕೂ ಹೋಮ್ಸ್ ಮತ್ತು ದೊಡ್ಡಗುಬ್ಬಿಯ ಮನೆಯೊಂದರಲ್ಲಿ ಆ.21ರಂದು ದಾಳಿ ನಡೆಸಿದ್ದ ಎನ್.ಸಿ.ಬಿ. ಅಧಿಕಾರಿಗಳ ದಾಳಿಯಲ್ಲಿ 145 MDMA ಮಾತ್ರೆಗಳು, 180 ಎಲ್‍ಎಸ್ಡಿ ಬ್ಲಾಟ್ಸ್ ಗಳನ್ನು ವಶಪಡಿಸಿಳ್ಳಲಾಗಿತ್ತು. ಅಲ್ಲದೇ ಡಿ ಅನಿಕಾ, ಅನೂಪ್ ಮತ್ತು ರಾಜೇಶ್ ಎಂಬ ಡ್ರಗ್ಸ್ ಡೀಲರ್ ಗಳನ್ನು ಬಂಧಿಸಲಾಗಿತ್ತು.

ಇದೀಗ ತೀವ್ರ ವಿಚಾರಣೆ ಬಳಿಕ ಆರೋಪಿ ಅನಿಕಾ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದು, ತಾವು ಕನ್ನಡ ಚಿತ್ರರಂಗದ ಖ್ಯಾತ ನಟ, ನಟಿಯರು, ಸಂಗೀತಗಾರರು, ನಿರ್ದೇಶಕರು ಹಾಗೂ ರಾಜಕಾರಣಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದುದಾಗಿ ಬಾಯ್ಬಿಟ್ಟಿದ್ದಾಳೆ.

ಅಲ್ಲದೇ ಇದೇ ಪ್ರಕರಣದ ಮುಂದುವರಿದ ಭಾಗವಾಗಿ ಸಿಸಿಬಿ ಪೊಲೀಸರು ದೇವನಹಳ್ಳಿ ಬಳಿ ಲಾರಿಯಲ್ಲಿ ಸಾಗಿಸುತ್ತಿದ್ದ 2 ಕ್ವಿಂಟಾಲ್ ಗಾಂಜಾ ವಶಕ್ಕೆ ಪಡೆದುಕೊಂಡಿದ್ದು, ಈ ವೇಳೆ ಮೂವರನ್ನು ಬಂಧಿಸಿದ್ದಾರೆ. ಬಂಧಿತನಾಗಿರುವ ಆರೋಪಿ ಕೈಸರ್ ಈ ಬೃಹತ್ ಡ್ರಗ್ ಡೀಲರ್ ಗಳ ಕಿಂಗ್ ಪಿನ್ ಎಂದು ಶಂಕಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...