alex Certify ‘ಜೆಸ್ಸಿ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 5 ವರ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಜೆಸ್ಸಿ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 5 ವರ್ಷ

ಪವನ್ ಒಡೆಯರ್ ನಿರ್ದೇಶನದ ‘ಜೆಸ್ಸಿ’ ಬಿಡುಗಡೆಯಾಗಿ ಇಂದಿಗೆ 5 ವರ್ಷಗಳು ಕಳೆದಿವೆ. 2016 ಮಾರ್ಚ್ 25ರಂದು ಈ ಸಿನಿಮಾ ತೆರೆಕಂಡಿತ್ತು. ಡಾಲಿ ಧನಂಜಯ್, ಪಾರುಲ್ ಯಾದವ್ ಮತ್ತು ರಘು ಮುಖರ್ಜಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಚಿಕ್ಕಣ್ಣ, ಸಾಧು ಕೋಕಿಲಾ, ಗೌತಮಿ, ಅವಿನಾಶ್ ಸೇರಿದಂತೆ ಹಲವಾರು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದರು. 5 ವರ್ಷ ಪೂರೈಸಿದ ಸಂತಸವನ್ನು ನಟಿ ಪಾರುಲ್ ಯಾದವ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ನಾಳೆ ತೆರೆಮೇಲೆ ಬರಲಿದೆ ಚಿರಂಜೀವಿ ಸರ್ಜಾ ಅಭಿನಯದ ‘ರಣಂ’ ಸಿನಿಮಾ

ಕೆಲ ಸಾಲುಗಳನ್ನು ಬರೆದುಕೊಳ್ಳುವ ಮೂಲಕ ನಟಿ ಪಾರುಲ್ ಯಾದವ್ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಇದು ನನ್ನ ವೃತ್ತಿ ಜೀವನದಲ್ಲಿ ಮೊದಲ ಹಾರರ್ ಸಿನಿಮಾ. ಮೈಮೇಲೆ ಪ್ರೇತ ಆವರಿಸಿಕೊಂಡಂತೆ ನಟಿಸುವುದು ಬಹಳ ಕಷ್ಟಕರ ನಟನೆಯಾಗಿತ್ತು. ಅಂತ ಕಷ್ಟವನ್ನು ಇಷ್ಟವಾಗುವಂತೆ ಮಾಡಿದ್ದು ನನ್ನ ಪ್ರೀತಿಯ ಜೆಸ್ಸಿ ಚಿತ್ರತಂಡ.

ನಂದಿನಿ ಪಾತ್ರದಲ್ಲಿ ನಟಿಸಿದ್ದು, ನನಗೆ ಮರೆಯಲಾಗದ ಅನುಭವ. ಇಂತಹ ಪಾತ್ರವನ್ನು ಕಟ್ಟಿಕೊಟ್ಟ ಪವನ್ ಒಡೆಯರ್ ಅವರಿಗೆ ಧನ್ಯವಾದಗಳು. ನನ್ನ ಸಹ ನಟ ಧನಂಜಯ್ ಅವರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...