ಜೂ. ಎನ್ ಟಿ ಆರ್ ಹಾಗೂ ರಾಮ್ ಚರಣ್ ಅಭಿನಯದ ಬಹು ನಿರೀಕ್ಷೆಯ ‘ಆರ್ ಆರ್ ಆರ್’ ಚಿತ್ರದ ಮೇಕಿಂಗ್ ವಿಡಿಯೋವೊಂದನ್ನು ಇದೇ ತಿಂಗಳು ಜುಲೈ 15 ಬೆಳಿಗ್ಗೆ 11 ಗಂಟೆಗೆ ರಿಲೀಸ್ ಮಾಡಲಿದ್ದಾರೆ.
ತೆಲುಗು ಸೇರಿದಂತೆ ಕನ್ನಡ ತಮಿಳು ಮಲೆಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ರಾಜಮೌಳಿ ನಿರ್ದೇಶನದ ಈ ಸಿನಿಮಾವನ್ನು ಡಿ.ವಿ.ವಿ. ದಾನಯ್ಯ ತಮ್ಮ ಡಿ.ವಿ.ವಿ. ಎಂಟರ್ ಟೈನ್ ಮೆಂಟ್ಸ್ ಬ್ಯಾನರ್ ನಡಿ ನಿರ್ಮಾಣ ಮಾಡುತ್ತಿದ್ದಾರೆ.
ದರ್ಶನ್ ಹೆಸರಲ್ಲಿ ವಂಚನೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ನಿರ್ಮಾಪಕ ಉಮಾಪತಿ ವಿರುದ್ದ ನೇರ ಆರೋಪ ಮಾಡಿದ ಅರುಣಾ ಕುಮಾರಿ
‘ಆರ್ ಆರ್ ಆರ್’ ಚಿತ್ರದಲ್ಲಿ ರಾಮ್ ಚರಣ್ ಹಾಗೂ ಜೂನಿಯರ್ ಎನ್ಟಿಆರ್ ಸೇರಿದಂತೆ ಆಲಿಯಾ ಭಟ್, ಅಜಯ್ ದೇವ್ ಗನ್, ಒಲಿವಿಯಾ ಮೊರಿಸ್, ಶ್ರೀಯಾ ಸರನ್, ರೇ ಸ್ಟೀವನ್ ಸನ್ ಮುಂತಾದವರು ತೆರೆ ಹಂಚಿಕೊಂಡಿದ್ದಾರೆ. ಸುಮಾರು 400 ಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಬಾಹುಬಲಿ ಚಿತ್ರದಂತೆ ಮತ್ತೊಂದು ದಾಖಲೆ ಬರೆಯಲು ಈ ಸಿನಿಮಾ ಸಜ್ಜಾಗಿದೆ.
https://www.instagram.com/p/CRLNuKjsABP/?utm_source=ig_web_copy_link
https://www.instagram.com/p/CRLNtt1DrF2/?utm_source=ig_web_copy_link