alex Certify ಚಿತ್ರಮಂದಿರಕ್ಕೆ ತೆರಳುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿತ್ರಮಂದಿರಕ್ಕೆ ತೆರಳುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಸಿನಿ ಪ್ರಿಯರಿಗೆ ಖುಷಿ ಸುದ್ದಿ ಈಗಾಗಲೇ ಸಿಕ್ಕಿದೆ. ಅಕ್ಟೋಬರ್ 15ರ ನಂತ್ರ ಸಿನಿಮಾ ಹಾಲ್ ಗಳು ತೆರೆಯಲಿವೆ. ಆದ್ರೆ ಕೊರೊನಾ ಹರಡದಂತೆ ತಡೆಯಲು ಕಠಿಣ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್, ಸಿನೆಮಾ ಹಾಲ್‌ಗಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಹೊರಡಿಸಿದ್ದಾರೆ. ಇದನ್ನು ಮಂಗಳವಾರ ಪ್ರಕಟಿಸಿದ್ದಾರೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರ ಪ್ರಕಾರ, ಚಿತ್ರೋದ್ಯಮಕ್ಕೆ ಸಂಬಂಧಿಸಿದ ಜನರ ಜೊತೆ ಸಮಾಲೋಚನೆ ನಡೆಸಿದ ನಂತ್ರ ಎಸ್‌ಒಪಿಯನ್ನು ಸಿದ್ಧಪಡಿಸಲಾಗಿದೆ. ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುವುದು ಎಂದವರು ಹೇಳಿದ್ದಾರೆ.

ಸಿನೆಮಾ ಹಾಲ್‌ನಲ್ಲಿ ಸಾಮಾಜಿಕ ಅಂತರ ಅನುಸರಿಸಬೇಕು. ಕೇವಲ ಶೇಕಡಾ 50 ರಷ್ಟು ಸೀಟುಗಳನ್ನು ಮಾತ್ರ ಪ್ರೇಕ್ಷಕರಿಗೆ ನೀಡಬೇಕು. ಪ್ರೇಕ್ಷಕರ ಮಧ್ಯೆ ಒಂದು ಸೀಟ್ ಅಂತರವಿರಬೇಕು. ಖಾಲಿ ಸೀಟ್ ಗುರುತಿಸುವುದು ಕಡ್ಡಾಯ.

ಸಿನಿಮಾ ಹಾಲ್ ಒಳಗೆ ಸ್ಯಾನಿಟೈಜರ್ ವ್ಯವಸ್ಥೆ ಮಾಡಲಾಗುವುದು. ಪ್ರೇಕ್ಷಕರಿಗೆ ಮಾಸ್ಕ್ ಕಡ್ಡಾಯವಾಗಲಿದೆ.

ಪ್ರತಿಯೊಬ್ಬರೂ ಆರೋಗ್ಯ ಸೇತು ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಕಡ್ಡಾಯ.

ಪ್ರತಿ ಪ್ರೇಕ್ಷಕರಿಗೂ ತಾಪಮಾನ ಪರೀಕ್ಷೆ ನಡೆಯಲಿದೆ.

ಟಿಕೆಟ್ ಮಾರಾಟಕ್ಕಾಗಿ ಹೆಚ್ಚಿನ ಕೌಂಟರ್‌ ಗಳನ್ನು ತೆರೆಯಲಾಗುತ್ತದೆ. ಆನ್‌ಲೈನ್ ಬುಕಿಂಗ್ ಗೆ ಹೆಚ್ಚು ಪ್ರೋತ್ಸಾಹ ನೀಡಲಾಗುವುದು.

ಪ್ಯಾಕೇಜ್ ಮಾಡಲಾದ ಆಹಾರ ಪದಾರ್ಥಗಳು ಮಾತ್ರ ಲಭ್ಯವಿರುತ್ತವೆ. ಇದಕ್ಕೆ ಹೆಚ್ಚಿನ ಕೌಂಟರ್ ತೆರೆಯಲಾಗುವುದು.

ಸಿನೆಮಾ ಹಾಲ್‌ನ ಸಿಬ್ಬಂದಿಯ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಲಾಗುವುದು. ಅವರಿಗೆ ಹ್ಯಾಂಡ್ ಗ್ಲೋಸ್, ಪಿಪಿಇ ಕಿಟ್‌ಗಳು ಮತ್ತು ಮಾಸ್ಕ್ ಇತ್ಯಾದಿಗಳನ್ನು ನೀಡಲಾಗುವುದು.

ಸಿನೆಮಾ ಹಾಲ್ ಸ್ಯಾನಿಟೈಜರ್ ಮಾಡುವುದು ಕಡ್ಡಾಯ. ಒಂದು ಶೋನಿಂದ ಇನ್ನೊಂದು ಶೋಗೆ 20-30 ನಿಮಿಷದ ಅಂತರವಿರಬೇಕು.

ಸಿನಿಮಾ ಹಾಲ್ ತಾಪಮಾನ 24 ರಿಂದ 30 ಡಿಗ್ರಿಗಳ ನಡುವೆ ಇರಬೇಕು.

ಸಿಂಗಲ್ ಸ್ಕ್ರೀನ್ ಸಿನೆಮಾ ಹಾಲ್‌ನಲ್ಲಿ ಗಾಳಿಗೆ ವ್ಯವಸ್ಥೆ ಮಾಡಬೇಕು. ಕೊರೊನಾದಿಂದ ರಕ್ಷಿಸಲು ಒಂದು ನಿಮಿಷದ ಜಾಗೃತಿ ವಿಡಿಯೋ ತೋರಿಸುವುದು ಕಡ್ಡಾಯ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...