alex Certify ಖ್ಯಾತ ನಟ ಶಂಕರ್ ನಾಗ್ ಹುಟ್ಟುಹಬ್ಬಕ್ಕೆ ಶುಭಕೋರಿದ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖ್ಯಾತ ನಟ ಶಂಕರ್ ನಾಗ್ ಹುಟ್ಟುಹಬ್ಬಕ್ಕೆ ಶುಭಕೋರಿದ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು

ಇಂದು ಖ್ಯಾತ ನಟ ಶಂಕರ್ ನಾಗ್ ಅವರ 66ನೇ ಜನ್ಮದಿನವಾಗಿದ್ದು ಸಿನಿಮಾ ಕಲಾವಿದರು ಹಾಗೂ ಅಭಿಮಾನಿಗಳಿಂದ  ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಶಂಕರ್ ನಾಗ್’ಒಂದಾನೊಂದು ಕಾಲದಲ್ಲಿ’ ಎಂಬ ಚಿತ್ರದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದು, 35ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಶಂಕರನಾಾಗ್ ಅಪಾರ ಸಾಧನೆ ಮಾಡಿದ್ದಾರೆ.

ಶಂಕರನಾಗ್ 1954 ನವೆಂಬರ್ 9ರಂದು ಜನಿಸಿದರು. ನಟ ಹಾಗೂ ನಿರ್ದೇಶಕರಾಗಿ ಮಿಂಚಿದ ಶಂಕರ್ ನಾಗ್ ಮಾಲ್ಗುಡಿ ಡೇಸ್ ಎಂಬ ಜನಪ್ರಿಯ ಧಾರವಾಹಿಯನ್ನು ಕೂಡ ನಿರ್ದೇಶಿಸಿದ ಪ್ರತಿಭಾವಂತ ನಟ.

ಪ್ರತಿ ಆಟೋಗಳಲ್ಲೂ ಶಂಕರನಾಗ್ ಅವರ ಭಾವಚಿತ್ರ ರಾರಾಜಿಸುತ್ತಿರುತ್ತದೆ. ಇಂದು ಇವರ ಹುಟ್ಟುಹಬ್ಬಕ್ಕೆ ಸಾಕಷ್ಟು ಸಿನಿಮಾ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...