ಅಲ್ಲು ಅರ್ಜುನ್ ಅವರ ಬುಟ್ಟಬೊಮ್ಮಾ ಹಾಡು ಕೇಳದವರಿಲ್ಲ. ಈ ಹಾಡು ಯುಟ್ಯೂಬ್ ನಲ್ಲಿ ದಾಖಲೆ ಕೂಡ ಮಾಡಿದೆ.
ಡಬ್ ಸ್ಮ್ಯಾಶ್ ಮಾಡುವವರಂತು ಈ ಹಾಡನ್ನು ಸಾಕಷ್ಟು ಬಳಸಿದ್ದಾರೆ. ಈ ಹಾಡು ಸಾಕಷ್ಟು ಜನಪ್ರಿಯತೆ ಪಡೆದಿದ್ದು, ಈ ಹಾಡಿಗೆ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಸಾಕಷ್ಟು ಬಾರಿ ಹೆಜ್ಜೆ ಹಾಕಿದ್ದಾರೆ. ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದೀಗ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಏಕದಿನ ಸರಣಿ ನಡೆಯುತ್ತಿದ್ದು, ಕ್ರೀಡಾಂಗಣದಲ್ಲಿ ಡೇವಿಡ್ ವಾರ್ನರ್ ಮತ್ತೊಮ್ಮೆ ಈ ಹಾಡಿಗೆ ಸ್ಟೆಪ್ ಹಾಕಿದ್ದಾರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.