alex Certify ಕೊರೊನಾ ಮಧ್ಯೆಯೂ ಶಾರೂಕ್‌ ಖಾನ್ ಅದ್ಧೂರಿ ಬರ್ತಡೇ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಮಧ್ಯೆಯೂ ಶಾರೂಕ್‌ ಖಾನ್ ಅದ್ಧೂರಿ ಬರ್ತಡೇ

ಅನೇಕ ಸಿನಿಮಾಗಳ ಮೂಲಕ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿರುವ ನಟ ಶಾರುಖ್ ಖಾನ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 55ನೇ ವಸಂತಕ್ಕೆ ಕಾಲಿಟ್ಟ ಈ ನಟನಿಗೆ ಅಭಿಮಾನಿಗಳಿಂದ, ನಟ-ನಟಿ, ನಿರ್ದೇಶಕರು, ನಿರ್ಮಾಪಕರಿಂದ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ. ಕೊರೊನಾ ನಡುವೆಯೂ ಈ ವರ್ಷ ಅದ್ಧೂರಿ ಬರ್ತಡೇಯನ್ನು ಶಾರುಖ್ ಆಚರಿಸಿಕೊಳ್ಳುತ್ತಿದ್ದಾರೆ.

ಹೌದು, ಪ್ರತಿ ವರ್ಷವೂ ಅವರ ಮನೆ ಮನ್ನತ್ ಮುಂದೆ ಸಾವಿರಾರು ಅಭಿಮಾನಿಗಳು ಸೇರಿ ಅದ್ಧೂರಿ ಬರ್ತಡೇ ಆಚರಣೆ ಮಾಡುತ್ತಿದ್ದರು. ಆದರೆ ಈ ವರ್ಷ ಇದಕ್ಕೆ ಕೊರೊನಾ ಬ್ರೇಕ್ ಕೊಟ್ಟಿದೆ. ಹಾಗಂತ ಅದ್ಧೂರಿ ಬರ್ತಡೆಯನ್ನೇನು ಅಭಿಮಾನಿಗಳು ಬಿಟ್ಟಿಲ್ಲ. ಈ ವರ್ಷ ವಿಭಿನ್ನವಾಗಿ 5 ಸಾವಿರ ಅಭಿಮಾನಿಗಳು ಸೇರಿಕೊಂಡು ಇವರ ಬರ್ತಡೇ ಆಚರಣೆ ಮಾಡುತ್ತಿದ್ದಾರೆ.

ಈ ವರ್ಷ ಕೊರೊನಾದಿಂದ ಮನೆ ಮುಂದೆ ಸೇರದೆ ವಿಡಿಯೋ ಕಾನ್ಫರೆನ್ಸ್ ಅಂದರೆ ವರ್ಚುವಲ್ ಮೂಲಕ ಅಭಿಮಾನಿಗಳು ಬಾಲಿವುಡ್ ಬಾದ್‌ಷಾಗೆ ವಿಶ್ ಮಾಡಿ ಬರ್ತಡೇ ಆಚರಿಸಲಿದ್ದಾರೆ. ಈ ವಿಡಿಯೋ ಕಾಲ್‌ನಲ್ಲಿ ಸುಮಾರು 5 ಸಾವಿರ ಅಭಿಮಾನಿಗಳು ಇರಲಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಶಾರುಖ್, ಅಭಿಮಾನಿಗಳ ಬಳಿ ಮನೆ ಮುಂದೆ ಬರದಂತೆ ಮನವಿ ಮಾಡಿದ್ದರು. ಆದರೆ ಬರ್ತಡೇ ಆಚರಿಸಲೇಬೇಕು ಎಂದುಕೊಂಡ ಅಭಿಮಾನಿಗಳು ವರ್ಚುವಲ್ ಮೂಲಕ ಆಚರಣೆ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...