ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದ ತೆಲುಗು ವರ್ಷನ್ ‘ಕಣ್ಣೇ ಅದಿರಿಂದಿ’ ಹಾಡನ್ನು ಹೇಳಿದ್ದ ಮಂಗ್ಲಿಗೆ ಕರ್ನಾಟಕದಲ್ಲಿ ಅಭಿಮಾನಿಗಳ ದಂಡೇ ಇದೆ.
ಹೈದರಾಬಾದ್ ನಲ್ಲಿ ನಡೆದ ʼರಾಬರ್ಟ್ʼ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ಮಂಗ್ಲಿ ‘ಕಣ್ಣೇ ಅದಿರಿಂದಿ’ ಹಾಡನ್ನು ಹೇಳಿದ್ದರು. ಈ ವಿಡಿಯೋ 50 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದು ಮುನ್ನುಗ್ಗುತ್ತಲೇ ಇದೆ.
ಮಾಲಾಶ್ರೀ ಪತಿ, ಕೋಟಿ ನಿರ್ಮಾಪಕ ರಾಮು ವಿಧಿವಶ
ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 124ನೇ ಚಿತ್ರವೊಂದನ್ನು ಬಾಲ ಶ್ರೀರಾಂ ಸ್ಟುಡಿಯೋಸ್ ಲಾಂಛನದಲ್ಲಿ ನಿರ್ಮಾಣ ಮಾಡುತ್ತಿದ್ದು, ಈ ಸಿನಿಮಾದಲ್ಲಿ ಮಂಗ್ಲಿ ಕೂಡ ನಟಿಸುತ್ತಿದ್ದಾರೆ. ತಮ್ಮ ಮಧುರವಾದ ಕಂಠದಿಂದ ಕನ್ನಡಿಗರ ಗಮನ ಸೆಳೆದಿದ್ದ ಮಂಗ್ಲಿ ಇದೀಗ ಸಿನಿಮಾದಲ್ಲಿ ಮಿಂಚಲಿದ್ದಾರೆ. ಟಾಲಿವುಡ್ ನಿರ್ದೇಶಕ ರಾಮ್ ಧುಲಿಪುಡಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.