
ಇದೀಗ ಈ ಹಾಡಿಗೆ ಕೇರಳ ಪೊಲೀಸರು ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಖಾಕಿ ಡ್ರೆಸ್ ಧರಿಸಿರುವ ಪೊಲೀಸರು ಹಾಡಿಗೆ ತಕ್ಕಂತೆ ಕುಣಿದು ಕುಪ್ಪಳಿಸಿದ್ದಾರೆ. ಮಹಿಳಾ ಪೊಲೀಸ್ ಒಬ್ಬರು ಮಾತ್ರ ಅದ್ಭುತವಾಗಿ ಕುಣಿದಿದ್ದರೆ, ಉಳಿದ ಪೊಲೀಸರು ಹೆಜ್ಜೆ ಹಾಕಲು ಸ್ವಲ್ಪ ತ್ರಾಸ ಪಟ್ಟಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ಖಾಕಿ ಏಕೆ ಸ್ವಲ್ಪ ಮೋಜು ಮಾಡಬಾರದು ಎಂದು ಶೀರ್ಷಿಕೆ ನೀಡಲಾಗಿದೆ.
ಕೇರಳದ ಕೊಚ್ಚಿಯಲ್ಲಿರುವ ಹೋಟೆಲ್ ಡ್ಯೂಲ್ಯಾಂಡ್ನ ಪ್ರವೇಶ ದ್ವಾರದಲ್ಲಿ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ವಿಡಿಯೋದಲ್ಲಿರುವವರು ನಿಜವಾಗಿಯೂ ಪೊಲೀಸರೇ ಅಥವಾ ಕಲಾವಿದರೇ ಎಂಬ ಬಗ್ಗೆ ಯಾವುದೇ ಸ್ಪಷ್ಟೀಕರಣವಿಲ್ಲ.
ಪೊಲೀಸರ ನೃತ್ಯದ ವಿಡಿಯೋ ಮಿಶ್ರ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ. ಕೆಲವರು ಪೊಲೀಸರ ಮೋಜಿನ ನೃತ್ಯವನ್ನು ಪ್ರೀತಿಸಿದ್ರೆ, ಇನ್ನೂ ಕೆಲವರು ಪೊಲೀಸರು ಸಮವಸ್ತ್ರ ಧರಿಸಿರೋ ವೇಳೆ ನೃತ್ಯ ಮಾಡಿದ್ದನ್ನು ಇಷ್ಟಪಟ್ಟಿಲ್ಲ.