alex Certify ಕಂಗನಾಗೆ ಶಾಕ್ ಮೇಲೆ ಶಾಕ್: ಬಿಎಂಸಿಯಿಂದ ಮತ್ತೆ ನೋಟಿಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂಗನಾಗೆ ಶಾಕ್ ಮೇಲೆ ಶಾಕ್: ಬಿಎಂಸಿಯಿಂದ ಮತ್ತೆ ನೋಟಿಸ್…!

ಸದ್ಯ ಬಾಲಿವುಡ್‌ನಲ್ಲಿ ಹೆಚ್ಚು ಚರ್ಚೆಯಲ್ಲಿರುವ ನಟಿ ಕಂಗನಾ ಅಂದರೆ ತಪ್ಪಾಗಲಿಕ್ಕಿಲ್ಲ. ಬಾಲಿವುಡ್ ಮೇಲೆ ಕಂಗನಾ ಮಾಡಿದ ಅನೇಕ ಆರೋಪಗಳು ಇಂದು ಅವರನ್ನು ಈ ಪರಿಸ್ಥಿತಿಗೆ ತಂದಿರಿಸಲು ಕಾರಣವಾಗಿವೆ ಎನ್ನುತ್ತಿದ್ದಾರೆ ಅನೇಕ ಜನ. ಅವರ ನೇರ ಹಾಗೂ ನಿಷ್ಠುರ ಮಾತುಗಳೇ ಇಷ್ಟಕ್ಕೆ ಕಾರಣವಾಯ್ತು ಅನ್ನೋ ಮಾತು ಬಿ ಟೌನ್‌ನಲ್ಲಿ ಕೇಳಿ ಬರುತ್ತಿವೆ.

ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಕಚೇರಿ ಅಕ್ರಮವಾಗಿ ನಿರ್ಮಾಣವಾಗಿದೆ ಎಂದು ಕಚೇರಿಯನ್ನು ತೆರವುಗೊಳಿಸಲು ಮುಂದಾಯ್ತು ಅಲ್ಲಿನ ಸ್ಥಳಿಯ ಆಡಳಿತ. ಅತ್ತ ಕಚೇರಿ ನೆಲಸಮ ಆಗುತ್ತಿದ್ದಂತೆಯೇ ಕೋರ್ಟ್ ಅದಕ್ಕೆ ತಡೆ ನೀಡಿತ್ತು. ಇದಾದ ಕೆಲವೇ ದಿನಗಳಲ್ಲಿ ಬೃಹತ್ ಮುಂಬೈ ಪಾಲಿಕೆ ಮತ್ತೊಂದು ನೋಟಿಸ್ ನ್ನು ಈ ನಟಿಗೆ ಜಾರಿ ಮಾಡಿದೆ.

ಹೌದು, ಖರ್‌ನಲ್ಲಿರುವ 5 ಅಂತಸ್ತಿನ ಮನೆಯಲ್ಲಿ ಈ ನಟಿ ವಾಸವಾಗಿದ್ದಾರೆ. ನಟಿ ವಾಸವಿರುವ ಈ ಮನೆಯ ಕೆಲವು ಭಾಗಗಳು ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ ಎಂಬ ಕಾರಣ ನೀಡಿ ಬಿಎಂಸಿ ನೊಟೀಸ್ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...