ಒಂದು ಕಡೆ ದೇಶದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿಲ್ಲ. ಇನ್ನೊಂದು ಕಡೆ ಲಾಕ್ ಡೌನ್ ಅನೇಕರ ಹೊಟ್ಟೆಗೆ ತಣ್ಣೀರು ಬಟ್ಟೆ ಗತಿ ಎನ್ನುವಂತೆ ಮಾಡಿದೆ. ಲಾಕ್ ಡೌನ್ ನಿಂದ ಬೀದಿಗೆ ಬಿದ್ದ ಜನರ ಸಹಾಯಕ್ಕೆ ಅನೇಕರು ಮುಂದೆ ಬಂದಿದ್ದಾರೆ. ಇದ್ರಲ್ಲಿ ಬಾಲಿವುಡ್ ಸ್ಟಾರ್ ಅಮೀರ್ ಖಾನ್ ಕೂಡ ಹೊರತಾಗಿಲ್ಲ.
ಅಮೀರ್ ಖಾನ್ ಫೋಟೋ ಒಂದು ವೈರಲ್ ಆಗಿದೆ. ಅಮೀರ್ ಖಾನ್ ವಿಭಿನ್ನ ರೀತಿಯಲ್ಲಿ ಬಡವರಿಗೆ ಹಣ ಹಂಚಿದ್ದಾರೆ. ಅಮೀರ್ ಖಾನ್ ಒಂದು ಕೆ.ಜಿ. ಹಿಟ್ಟಿನ ಜೊತೆ ತಲಾ 15 ಸಾವಿರ ರೂಪಾಯಿಯನ್ನು ಒಬ್ಬೊಬ್ಬರಿಗೆ ನೀಡಿದ್ದಾರೆ. ಕೆಲವರು ಒಂದು ಕೆ.ಜಿ. ಹಿಟ್ಟು ಸಾಲುವುದಿಲ್ಲವೆಂದು ಇದನ್ನು ಪಡೆಯಲು ನಿರಾಕರಿಸಿದ್ದರಂತೆ. ಆದ್ರೆ ಹಿಟ್ಟು ಪಡೆದವರು ಅಲ್ಲಿದ್ದ 15 ಸಾವಿರ ರೂಪಾಯಿ ನೋಡಿ ದಂಗಾಗಿದ್ದಾರೆ.
ಟಿಕ್ ಟಾಕ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಏಪ್ರಿಲ್ 24ರಂದು ಅಮೀರ್ ಖಾನ್ ಹಿಟ್ಟನ್ನು ಹಂಚಿದ್ದಾರೆ ಎನ್ನಲಾಗ್ತಿದೆ. ಆದ್ರೆ ಈ ಬಗ್ಗೆ ಸ್ಪಷ್ಟತೆ ಸಿಗ್ತಿಲ್ಲ.