alex Certify ಎರಡನೇ ಮಗುವಿನ ನಿರೀಕ್ಷೆಯಲ್ಲಿ ಹರೀಶ್ ರಾಜ್ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡನೇ ಮಗುವಿನ ನಿರೀಕ್ಷೆಯಲ್ಲಿ ಹರೀಶ್ ರಾಜ್ ದಂಪತಿ

ಧಾರವಾಹಿ ಹಾಗೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಹರೀಶ್ ರಾಜ್ ʼಬಿಗ್ ಬಾಸ್ʼ ಸೀಸನ್ 7 ರಲ್ಲಿ ಸ್ಪರ್ದಿಸುವ ಮೂಲಕ  ಸಾಕಷ್ಟು ಜನಪ್ರಿಯತೆ ಪಡೆದರು.

ಇದೀಗ ಹರೀಶ್ ರಾಜ್ ಅವರ ಪತ್ನಿ ಶ್ರುತಿ ಎರಡನೇ ಮಗುವಿಗೆ ತಾಯಿಯಾಗುತ್ತಿದ್ದು ಈ ಸಂತಸವನ್ನು ಹರೀಶ್ ರಾಜ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹರೀಶ್ ರಾಜ್ 2014ರಂದು ಶ್ರುತಿ ಲೋಕೇಶ್ ಜೊತೆ ವಿವಾಹವಾಗಿದ್ದರು. ಇದೀಗ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ನಮ್ಮ ಕುಟುಂಬವು ಬೆಳೆಯುತ್ತಿದೆ ಮತ್ತು ಅದರೊಂದಿಗೆ ಪ್ರೀತಿ ಅರಳುತ್ತಲೇ ಇದೆ. ನಮ್ಮ ಎರಡನೇ ಮಗುವನ್ನು ನಾವು ಸ್ವಾಗತಿಸುತ್ತಿದ್ದು, ನಿಮ್ಮ ಆಶಿರ್ವಾದ ಹಾಗೂ ಶುಭಾಶಯ ನಮ್ಮ ಮೇಲಿರಲಿ ಎಂದು ಹರೀಶ್ ರಾಜ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...