alex Certify ಈ ಬಾಲಿವುಡ್ ಸ್ಟಾರ್ಸ್ ಸತ್ತ ಮೇಲೆ ಬಿಡುಗಡೆಯಾಗಿದೆ ಸಿನಿಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಬಾಲಿವುಡ್ ಸ್ಟಾರ್ಸ್ ಸತ್ತ ಮೇಲೆ ಬಿಡುಗಡೆಯಾಗಿದೆ ಸಿನಿಮಾ

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಸದ್ಯ ಸುದ್ದಿಯಲ್ಲಿದೆ. ಸುಶಾಂತ್ ಸಾವಿನ ನಂತ್ರ ಜುಲೈ 24ರಂದು ದಿಲ್ ಬೆಚರಾ ಚಿತ್ರ ಬಿಡುಗಡೆಯಾಗಿದೆ. ಸುಶಾಂತ್ ಮಾತ್ರವಲ್ಲ. ಬಾಲಿವುಡ್ ನಲ್ಲಿ ಅನೇಕ ಕಲಾವಿದರ ನಿಧನದ ನಂತ್ರ ಅವ್ರ ಚಿತ್ರ ಬಿಡುಗಡೆಯಾಗಿದೆ.

90 ರ ದಶಕದ ಬಾಲಿವುಡ್‌ನ ಸೂಪರ್‌ಸ್ಟಾರ್ ನಟಿ ಶ್ರೀದೇವಿ ಫೆಬ್ರವರಿ 24, 2018 ರಂದು ನಿಧನರಾಗಿದ್ದಾರೆ. ಅವ್ರ ನಿಧನದ ನಂತ್ರ ಡಿಸೆಂಬರ್‌ನಲ್ಲಿ ಝೀರೋ ಚಿತ್ರ ಬಿಡುಗಡೆಯಾಯ್ತು. ಈ ಚಿತ್ರದಲ್ಲಿ ಶಾರುಖ್ ಖಾನ್, ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್ ಮುಂತಾದ ತಾರೆಯರು ನಟಿಸಿದ್ದರು. ಶ್ರೀದೇವಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

ಬಾಲಿವುಡ್‌ನ ಹಿರಿಯ ನಟ ಓಂ ಪುರಿ, ಹೃದಯಾಘಾತದಿಂದ ಜನವರಿ 6, 2017ರಂದು ವಿದಾಯ ಹೇಳಿದ್ದರು. ಓಂಪೂರಿ ಸಾವನ್ನಪ್ಪಿದ ಕೆಲವು ತಿಂಗಳ ನಂತರ ಈದ್ ಸಂದರ್ಭದಲ್ಲಿ ಟ್ಯೂಬ್ಲೈಟ್ ಚಿತ್ರ ಬಿಡುಗಡೆಯಾಗಿತ್ತು.

ನಟಿ ಸ್ಮೀತಾ ಪಾಟೀಲ್ 1986 ರ ಡಿಸೆಂಬರ್ 13 ರಂದು ನಿಧನರಾದರು. ಸ್ಮಿತಾ ಅವರ ಕೊನೆಯ ಚಿತ್ರ, ಕಿಂಗ್ ಆಫ್ ದಿ ಸ್ಟ್ರೀಟ್ಸ್ ಅವರ ಮರಣದ ಮೂರು ವರ್ಷಗಳ ನಂತರ 1989 ರಲ್ಲಿ ಬಿಡುಗಡೆಯಾಯಿತು.

19 ನೇ ವಯಸ್ಸಿನಲ್ಲಿ ನಿಧನರಾದ ದಿವ್ಯಾ ಭಾರತಿ, ಬಾಲಿವುಡ್ ಗೆ ಆಘಾತ ನೀಡಿದ್ದರು. ಮರಣದ 9 ತಿಂಗಳ ನಂತರ ದಿವ್ಯಾ ಅವರ ಚೆಸ್ ಚಿತ್ರ ಬಿಡುಗಡೆಯಾಗಿತ್ತು. ಅದು ಗಲ್ಲಾಪೆಟ್ಟಿಗೆಯಲ್ಲಿ ಸೂಪರ್ ಹಿಟ್ ಆಗಿತ್ತು.

ನಟಿ ಮೀನಾ ಕುಮಾರಿ 1972 ರಲ್ಲಿ ನಿಧನರಾದರು. ಆ ಸಮಯದಲ್ಲಿ ಮೀನಾ ಕುಮಾರಿಗೆ ಕೇವಲ 38 ವರ್ಷ. ಮೀನಾ ಅವರ ಮರಣದ ನಂತರ, ಅವರ ಕೊನೆಯ ಚಿತ್ರ 1972 ರಲ್ಲಿ ಬಿಡುಗಡೆಯಾಯಿತು. ನಟ ರಾಜೇಶ್ ಖನ್ನಾ 2012 ರಲ್ಲಿ ಹೃದಯಾಘಾತದಿಂದ ನಿಧನರಾದರು. ಅವರ ಚಿತ್ರ ರಿಯಾದಾಟ್ 2014 ರಲ್ಲಿ ಬಿಡುಗಡೆಯಾಯಿತು.

ನಟ ಶಮ್ಮಿ ಕಪೂರ್ 2011 ರ ಆಗಸ್ಟ್ 14 ರಂದು ನಿಧನರಾದರು. ಅವರ ಕೊನೆಯ ಚಿತ್ರ ರಾಕ್‌ಸ್ಟಾರ್, ಅದೇ ವರ್ಷ ನವೆಂಬರ್‌ನಲ್ಲಿ ಬಿಡುಗಡೆಯಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...