alex Certify ಇಂದು ವರನಟ ಡಾ. ರಾಜ್ ಕುಮಾರ್ ಜನ್ಮದಿನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ವರನಟ ಡಾ. ರಾಜ್ ಕುಮಾರ್ ಜನ್ಮದಿನ

ಇಂದು ವರನಟ, ನಟಸಾರ್ವಭೌಮ, ಡಾ.ರಾಜ್ ಕುಮಾರ್ ಅವರ 92ನೇ ಜನ್ಮದಿನವಾಗಿದ್ದು, ಡಾ.ರಾಜ್ ಕುಮಾರ್ 1929 ಏಪ್ರಿಲ್ 24ರಂದು ಗಾಜನೂರಿನಲ್ಲಿ ಜನಿಸಿದ್ದರು. ಅವರು 1944ರಂದು ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ಕಣ್ಣಪ್ಪನ ಪಾತ್ರದಲ್ಲಿ ಅಭಿನಯಿಸುವ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು.

ಸುಮಾರು 200 ಕ್ಕೂ ಅಧಿಕ ಚಲನಚಿತ್ರಗಳಲ್ಲಿ ನಟಿಸಿರುವ ರಾಜ್ ಕುಮಾರ್ ಕೇವಲ ನಾಯಕ ನಟಲ್ಲದೇ ಹಿನ್ನೆಲೆ ಗಾಯಕರಾಗಿಯೂ ಸಹ ಹೆಸರು ಮಾಡಿದ್ದಾರೆ. ಸಾಕಷ್ಟು ಪ್ರಶಸ್ತಿಗಳು ಹಾಗೂ ಬಿರುದುಗಳನ್ನು ರಾಜ್ ಕುಮಾರ್ ಅವರಿಗೆ ಒಲಿದುಬಂದಿವೆ.

ಡಾ.ರಾಜ್ ಕುಮಾರ್ ಅಭಿನಯಿಸಿದ ಕೊನೆಯ ಸಿನಿಮಾ ‘ಶಬ್ದವೇದಿ’ 2000ನೇ ಇಸವಿಯಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ಬಳಿಕ ಯಾವ ಚಿತ್ರಗಳಲ್ಲೂ ರಾಜ್ ಕುಮಾರ್ ಕಾಣಿಸಿಕೊಳ್ಳಲಿಲ್ಲ. ಅಭಿಮಾನಿಗಳನ್ನು ʼದೇವರುʼ ಎಂದೇ ಕರೆಯುತ್ತಿದ್ದ ರಾಜ್ ಕುಮಾರ್ 2006 ಏಪ್ರಿಲ್ 12ರಂದು ನಿಧನರಾದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...