alex Certify ಇಂದು ಟೈಗರ್ ಪ್ರಭಾಕರ್ ಹುಟ್ಟುಹಬ್ಬ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಟೈಗರ್ ಪ್ರಭಾಕರ್ ಹುಟ್ಟುಹಬ್ಬ

ನಟ ಟೈಗರ್ ಪ್ರಭಾಕರ್ ಇಹಲೋಕ ತ್ಯಜಿಸಿ ಈಗಾಗಲೇ 20 ವರ್ಷ ಕಳೆದಿವೆ. ಇಂದಿಗೂ ಕೂಡ ಪ್ರಭಾಕರ್ ಗೆ ಅಭಿಮಾನಿಗಳ ದಂಡೇ ಇದೆ. ಇಂದು ಅವರ 71ನೇ ಹುಟ್ಟುಹಬ್ಬವಾಗಿದೆ.

ಟೈಗರ್ ಪ್ರಭಾಕರ್ ‘ಕಾಡಿನ ರಹಸ್ಯ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಕನ್ನಡ ಚಿತ್ರರಂಗದ ಅತ್ಯುತ್ತಮ ಖಳನಾಯಕನಾಗಿ ಮಿಂಚಿದರು.

‘ವಿಘ್ನೇಶ್ವರನ ವಾಹನ’ ಸಿನಿಮಾದಲ್ಲಿ ಮೊದಲ ಬಾರಿ ನಾಯಕನಾಗಿ ಅಭಿನಯಿಸಿದರು.

ಏಪ್ರಿಲ್ 2ರಂದು ‘RRR’ ಚಿತ್ರದ ಅಜಯ್ ದೇವಗನ್ ಫಸ್ಟ್ ಲುಕ್ ರಿಲೀಸ್

ನಟ ಟೈಗರ್ ಪ್ರಭಾಕರ್ ಕನ್ನಡ ಸೇರಿದಂತೆ ತಮಿಳು, ಮಲೆಯಾಳಂ, ತೆಲುಗು, ಹಿಂದಿ ಚಿತ್ರರಂಗದಲ್ಲಿ ಖಳನಾಯಕನಾಗಿ ನಟಿಸಿದ್ದಾರೆ. ನಿರ್ದೇಶಕ ಹಾಗೂ ನಿರ್ಮಾಪಕನಾಗಿಯೂ ಕಾರ್ಯನಿರ್ವಹಿಸಿದ್ದಾರೆ. 2001 ರ ಮಾರ್ಚ್ 25 ರಂದು ಟೈಗರ್‌ ಪ್ರಭಾಕರ್ ನಿಧನರಾದರು. ಪ್ರಭಾಕರ್ 1950 ಮಾರ್ಚ್ 30ರಂದು ಜನಿಸಿದ್ದು, ಇಂದು ಅವರ 71ನೇ ಜನ್ಮದಿನವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...